ವೀರ ಸಾವರ್ಕರ್ ಇತಿಹಾಸ ತಿಳ್ಕೊಳ್ದೆ ಏನೇನೋ ಮಾತನಾಡ್ಬಾರ್ದು: ಸಚಿವ ವಿ. ಸೋಮಣ್ಣ ಕಿಡಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಇತಿಹಾಸದ ಬಗ್ಗೆ ಅರಿಯದೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಕಿಡಿಕಾರಿದರು.

ಗುರುವಾರ ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ದಿನೇಶ ಗುಂಡೂರಾವ್ ಗುಂಡೂರಾವ್ ಮಗನಾಗಿದ್ದು, ಅವರ ಬಗ್ಗೆ ಅಪರಾ ಗೌರವವಿದೆ. ಇತಿಹಾಸ ತಿಳಿದುಕೊಳ್ಳದೆ ಸಾವರ್ಕರ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ದಿನೇಶ ಗುಂಡೂರಾವ್ ಯಾವ ಅರ್ಥದಲ್ಲಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದರು.

ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಅವರ ಯಾಕೆ ಈ ರೀತಿ ಮಾತನಾಡುತ್ತಾರೆ ಗೊತ್ತಿಲ್ಲ. ಸಿಟ್ಟಿನಲ್ಲಿ ಆಡಿದ ಮಾತು ವಾಪಾಸ್ ಬರಲ್ಲ. ಸದ್ಯ ಸಿಟ್ಟಿ‌ನ ಮಾತಿಗೂ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಯಾವ ಬಣವೂ ಇಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿರುವುದು ನನಗೆ ಸರಿಯಾಗಿ ಮಾಹಿತಿ ಇಲ್ಲ. ಬಿಜೆಪಿ ಯಲ್ಲಿ ಇರೋದ ಒಂದೇ ಬಣ ಅದು ಭಾರತೀಯ ಜನತಾ ಪಕ್ಷ ಎಂದರು.

ಮಹಾನ ನಾಯಕರು ಸಾವಿರ ಕೋಟಿ ರೂಪಾಯಿ ತೆಗೆದಿಟ್ಟಿರೋ ಬಗ್ಗೆ ಗೊತ್ತಿಲ್ಲ. ಆ ಪುಣ್ಯಾತ್ಮ ಯಾರು ಅಂತನೂ ಗೊತ್ತಿಲ್ಲ. ಅನವಶ್ಯಕವಾಗಿ ಈ ತರ ಮಾಯನಾಡುವುದು ಸರಿಯಲ್ಲ. ಪಕ್ಷಕ್ಕೆ ಮುಜುಗರ ಆಗೋತರ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!