ಕ್ಯಾಪ್ಸಿಕಂ ಗ್ರೇವಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಸುಲಭ ಹಾಗೂ ರುಚಿಕರವಾದ ಸೈಡ್ ಡಿಶ್ ಆಗಿದೆ. ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆ ಸವಿಯಲು ಅತ್ಯುತ್ತಮವಾದ ಸೈಡ್ ಡಿಶ್ ಆಗಿದೆ.
ಬೇಕಾಗುವ ಸಾಮಗ್ರಿಗಳು
ಕ್ಯಾಪ್ಸಿಕಂ
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಕಡಲೆಹಿಟ್ಟು
ಖಾರದ ಪುಡಿ
ಧನಿಯಾ ಪುಡಿ
ಗರಂ ಮಸಾಲಾ ಪುಡಿ
ಅರಿಶಿನ ಪುಡಿ
ಸಾಸಿವೆ ಮತ್ತು ಜೀರಿಗೆ
ಎಣ್ಣೆ
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ ಕಡಲೆಹಿಟ್ಟನ್ನು ಹಸಿ ವಾಸನೆ ಹೋಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ಪಕ್ಕಕ್ಕೆ ಎತ್ತಿಡಬೇಕು. ನಂತರ ಅದೇ ಬಾಣಲೆಗೆ 1ಚಮಚ ಎಣ್ಣೆ ಹಾಕಿ, ಹೆಚ್ಚಿದ ಕ್ಯಾಪ್ಸಿಕಂ ತುಂಡುಗಳನ್ನು 2-3 ನಿಮಿಷ ಹುರಿದು ಬೇರೆ ಪಾತ್ರೆಗೆ ಹಾಕಿ, ಇನ್ನುಳಿದ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ ಮತ್ತು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ನಂತರಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ಟೊಮೆಟೊ ಪೇಸ್ಟ್ ಸೇರಿಸಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಬೇಕು. ನಂತರ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಹುರಿದ ಕ್ಯಾಪ್ಸಿಕಂ ಮತ್ತು ಹುರಿದ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಮಸಾಲೆಯೊಂದಿಗೆ ಬೆರೆಸಿ. ಅರ್ಧ ಲೋಟ ನೀರು ಮುಚ್ಚಿ, ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಒಲೆಯಿಂದ ಇಳಿಸಿದರೆ ಬಿಸಿಬಿಸಿಯಾದ ರುಚಿಕರ ಕ್ಯಾಪ್ಸಿಕಂ ಕರಿ ಸವಿಯಲು ಸಿದ್ಧವಾಗುತ್ತದೆ.



