ಹೊಸದಿಗಂತ ವರದಿ ರಾಯಚೂರು:
ನಗರದ ಹೊರವಲಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಓರ್ವ ಕುರಿಗಾಯಿ ಹಾಗೂ 6 ಕುರಿಗಳು ಸಾವು.
ಪವರ್ ಗ್ರಿಡ್ ಬಳಿ ಘಟನೆ ಜರುಗಿದ್ದು ಈ ಘಟನೆಯಲ್ಲಿ ಮೃತ ವ್ಯಕ್ತಿಯನ್ನು ತೆಲಂಗಾಣದ ಕೆ.ಟಿ.ದೊಡ್ಡಿ ಮೂಲದ ಶಿವು(35) ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ ಕುರಿಗಳೊಂದಿಗೆ ಹೊರಟಿದ್ದಾಗ ಘಟನೆ ಸಂಭವಿಸಿದೆ ಅಪಘಾತ ಬಳಿಕ ಡಿಕ್ಕಿ ಹೊಡೆದ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದಾನೆ.
ಇದೇ ರೀತಿಯ ಘಟನೆ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ಅಪಘಾತ ಸಂಭವಿಸಿ 11 ಕುರಿಗಳು ಸಾವನ್ನಪ್ಪಿದ್ದವು. ಈ ಘಟನೆಗೆ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳು ಪ್ರಮುಖ ಕಾರಣವಾಗಿತ್ತು. ಆದರೆ ಇದು ರಾಜ್ಯ ಹೆದ್ದಾರಿಯಲ್ಲಿ ಈ ಘಟೇ ಜರುಗಿದೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.