Wednesday, March 29, 2023

Latest Posts

ನಗರದ ಜನರ ಹೊಟ್ಟೆ ತುಂಬಿಸೋಕೆ ಬರ್ತಿದೆ ವರ್ಟಿಕಲ್‌ ಫಾರ್ಮಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೀವು ನಗರವಾಸಿಗಳಾಗಿದ್ದರೆ ತಿನ್ನುವ ತರಕಾರಿ, ಹಣ್ಣುಗಳು ಹೀಗೆ ಎಲ್ಲ ತಿನ್ನುವ ಪದಾರ್ಥಗಳೂ ಕೂಡ ಹೊರಗಿನಿಂದಲೇ ತರಿಸಿಕೊಳ್ಳಬೇಕಾಗುತ್ತದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ನಗರ ಜೀವನದ ಅತಿ ಕಷ್ಟವೆಂದೆನಿಸುವ ಸಂದರ್ಭವನ್ನು ನೀವು ನೋಡಿರುತ್ತೀರಿ. ಹಳ್ಳಿಗಳಲ್ಲಿ, ಅಥವಾ ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ಇರೋದಿಲ್ಲ. ಯಾಕೆಂದರೆ ಅಗತ್ಯವಿರೋ ವಸ್ತುಗಳನ್ನು ಅವರರೇ ಸ್ವತಃ ಬೆಳೆದುಕೊಂಡು ಬಿಡುತ್ತಾರೆ. ಆದರೆ ನಗರ ಜೀವನ ಸದ್ಯದ ಮಟ್ಟಿಗಂತೂ ಸಂಪೂರ್ಣವಾಗಿ ಹೊರಗಿನಿಂದ ಬರುವ ವಸ್ತುಗಳ ಮೇಲೆಯೇ ಅವಲಂಬಿತವಾಗಿದೆ. ಒಂದು ವೇಳೆ ಈ ಸರಬರಾಜೇನಾದರೂ ಸ್ಥಗಿತವಾಗಿಬಿಟ್ಟರೆ ನಗರದ ಪರಿಸ್ಥಿತಿ ಏನಾಗಬಹುದು ಎಮಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಈಗ ನಗರದಲ್ಲೇ ನೀವು ಕೃಷಿ ಮಾಡಬಹುದಾದ ವಿಧಾನವೊಂದು ಜನಪ್ರಿಯತೆ ಗಳಿಸುತ್ತಿದೆ. ಅದೇ ʼವರ್ಟಿಕಲ್‌ ಫಾರ್ಮಿಂಗ್‌ʼ.

ಕನ್ನಡಕ್ಕೆ ಶಬ್ದಶಃ ತರ್ಜುಮೆ ಗೊಳಿಸಿದರೆ ʼಲಂಬ ಕೃಷಿ ಎಂದಾಗುತ್ತದೆ. ಇದೇನಿದು? ಅಂತ ತಲೆಕೆಡಿಸಿಕೊಳ್ಳಬೇಡಿ. ಇದು ನಗರ ಪ್ರದೇಶದಲ್ಲಿಯೂ ಸುಲಭವಾಗಿ ಮಾಡಬಹುದಾದ ಕೃಷಿ ವಿಧಾನ. ನೀವಿಗ ನಿಮ್ಮ ಮನೆಗಳ ಮುಂದೆ ಹೇಗೆ ಚಿಕ್ಕ ಚಿಕ್ಕ ಪಾಟ್‌ಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸುತ್ತೀರೋ ಅದೇ ರೀತಿ ಪಾರ್ಕಿಂಗ್‌ ಜಾಗದಲ್ಲಿಯೋ, ಅಥವಾ ಕಂಟೇನರ್‌ ಗಳಲ್ಲಿಯೋ ತುಸು ದೊಡ್ಡ ಕೊಳವೆಗಳಲ್ಲಿಯೋ ಮಾಡಬಹುದಾದ ಬಹುಅಂತಸ್ತಿನ ಕೃಷಿ ವಿಧಾನ.ಅಂದರೆ ನಿಮ್ಮ ಕೃಷಿ ಕ್ಷೇತ್ರದ ಗಾತ್ರ ಮತ್ತು ವಿನ್ಯಾಸಗಳು ಬೇರೆ ಬೇರೆ ರೀತಿಯಲ್ಲಿರಬಹುದು. ಈ ತೋಟಗಳನ್ನು ಎಲ್ಲಿಬೇಕಾದರೂ ನೀವು ಸಾಗಿಸಬಹುದು. ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯಿಂದ ಇವುಗಳು ನಿಯಂತ್ರಿಸಲ್ಪಡುತ್ತವೆ. ಬೆಳೆ ಯಾವರೀತಿ ಬೆಳವಣಿಗೆಯಾಗುತ್ತಿದೆ, ಎಷ್ಟು ತಾಪಮಾನದ ಅಗತ್ಯವಿದೆ, ಎಷ್ಟು ತೇವಾಂಶವಿದೆ ಎಂಬುದೆಲ್ಲ ಮಷೀನ್‌ ಲರ್ನಿಂಗ್‌ (ಯಂತ್ರಕಲಿಕೆ) ಬಳಸಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಪ್ಲೆಂಟಿ ಎಂಬ ಹೆಸರಿನ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಒಳಾಂಗಣ ಕೃಷಿ ಕಂಪನಿಯೊಂದು 100 ಕ್ಕೂ ಹೆಚ್ಚು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳ ತಂಡವನ್ನು ನೇಮಿಸಿಕೊಂಡಿದ್ದು ಎಲ್‌ಇಡಿ ಬಲ್ಪುಗಳನ್ನು ಬಳಸಿ ಸೂರ್ಯನ ಬೆಳಕನ್ನೂ ಕೂಡ ಕೃತಕವಾಗಿ ನಿರ್ಮಿಸಿ ಅವುಗಳ ಆಧಾರದ ಮೇಲೆ ಸಸ್ಯಗಳ ಬೆಳವಣಿಗೆಗೆ ಅದು ಪುಷ್ಟಿ ನೀಡಲಿದೆ. ಇದು ಸಸ್ಯಗಳ ಆರೋಗ್ಯ ಮತ್ತು ಬೆಳವಣಿಗೆಯನ್ನು ಅಗತ್ಯಕ್ಕನುಗುಣವಾಗಿ ನಿಯಂತ್ರಿಸುವ ವ್ಯವಸ್ಥೆಯನ್ನೂ ಹೊಂದಿದ್ದು ನಮಗೆ ಯಾವ ರೀತಿಯಲ್ಲಿ ಬೆಳೆ ಬೇಕೋ ಆ ರೀತಿಯಲ್ಲಿ ಬೆಳೆ ಬೆಳೆಯ ಬಹುದು ಎನ್ನಲಾಗಿದೆ. ಅಲ್ಲದೇ ಇದು ಕೃತಕ ವ್ಯವಸ್ಥೆಯಾಗಿರುವುದರಿಂದ ನೈಸರ್ಗಿಕ ಹೊಲ ಗದ್ದೆಗಳಲ್ಲಿರುವ ಸಮಸ್ಯೆಗಳು ಇಲ್ಲಿರುವುದಿಲ್ಲ. ಇದು ಸಾಂಪ್ರದಾಯಿಕ ಕೃಷಿಗಿಂತ 95 ಶೇಕಡಾದಷ್ಟು ಕಡಿಮೆ ನೀರು ಉಪಯೋಗಿಸುತ್ತದೆ. ನಗರ ಪ್ರದೇಶದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಇದು ಕಾರ್ಯನಿರ್ವಹಿಸಬಲ್ಲುದಾಗಿದೆ. ಒಂದು ಅಂದಾಜಿನ ಪ್ರಕಾರ 2050 ರ ಹೊತ್ತಿಗೆ ಜಾಗತಿಕ ಜನಸಂಖ್ಯೆಯು 9 ಬಿಲಯನ್‌ ದಾಟಬಹುದಾಗಿದ್ದು ಇದರಿಂದ ಆ ಸಮಯದಲ್ಲಿ ಆಹಾರದ ತೀವ್ರ ಕೊರತೆ ಉಂಟಾಗಬಹುದು ಎನ್ನಲಾಗಿದೆ. ಜಗತ್ತಿನ ಭೂ ಮೇಲ್ಮೈಯಲ್ಲಿ 38 ಶೇಕಡಾದಷ್ಟು ಕೃಷಿಗೆಂದೇ ಬಳಕೆಯಾಗುತ್ತಿದೆ. ಆದರೂ ಕೂಡ ಆಹಾರದ ಅಭಾವ ಎದುರಾಗಿದೆ. 2050ರ ವೇಳೆಗೆ 80 ಶೇಕಡಾದಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸುವ ಸಂಭವ ಇರುವುದರಿಂದ ಇದು ಮುಂದಿನ ದಿನಗಳಲ್ಲಿ ಈ ಆಹಾರ ಸಮಸ್ಯೆಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸಬಲ್ಲ ವ್ಯವಸ್ಥೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!