ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೇಕಲ್‌ನ ಶಾಲೆಯೊಂದರಲ್ಲಿ ಕಬಡ್ಡಿ ಪಂದ್ಯ ಆಯೋಜನೆ ಮಾಡಿದ್ದು, ಕಬಡ್ಡಿ ಪಂದ್ಯ ಆಡುತ್ತಲೇ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಕಬಡ್ಡಿ ಪಂದ್ಯ ಆಯೋಜಿಸಲಾಗಿತ್ತು. ಆಟ ಆಡುತ್ತಾ ವಿದ್ಯಾರ್ಥಿನಿ ಸಂಗೀತಾ (19) ರೈಡ್‌ಗೆ ಹೋಗಿದ್ದರು. ಅವರನ್ನು ಹಿಡಿಯಲು ಆಕೆಯ ಮೈ ಮೇಲೆ ಆಟಗಾರರು ಬಿದ್ದಿದ್ದಾರೆ. ಈ ವೇಳೆ ಸಂಗೀತಾಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.