ಬಾಲಿವುಡ್‌ ಹಿರಿಯ ನಟ ಸಮೀರ್ ಖಕ್ಕರ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ದೂರದರ್ಶನದ ಪ್ರಸಿದ್ಧ ಶೋ ʼನುಕ್ಕಡ್‌ʼ ನಲ್ಲಿ ಖೋಪ್ಡಿ ಪಾತ್ರದ ಮೂಲಕ ಹೆಚ್ಚು ಜನಮನ್ನಣೆ ಪಡೆದಿದ್ದ ಹಿರಿಯ ನಟ ಸಮೀರ್‌ ಖಕ್ಕರ್‌ (71) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ನಟ ಸತೀಶ್‌ ಕೌಶಿಕ್‌ ಸಾವಿನ ಬೆನ್ನಲ್ಲೇ ಸಮೀರ್ ಖಕ್ಕರ್ ನಿಧನದಿಂದ ಚಿತ್ರರಂಗಕ್ಕೆ ಮತ್ತೊಂದು ಬೇಸರ ಛಾಯೆ ಆವರಿಸಿದೆ.

ಮಾಹಿತಿಯ ಪ್ರಕಾರ ಸಮೀರ್‌ ಖಕ್ಕರ್‌ ಮಂಗಳವಾರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತದನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಹೃದಯ ಕಾರ್ಯನಿರ್ವಹಣೆ ನಿಂತು ಬಹು ಅಂಗಾಂಗ ವೈಫಲ್ಯದ ಹಿನ್ನೆಲೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಸಮೀರ್‌ ಖಕ್ಕರ್‌ 90ರ ದಶಕದ ಜನಪ್ರಿಯ ನಟ, ಅವರು 1996ರಲ್ಲಿ ಯುಎಸ್‌ಗೆ ತೆರಳಿದ ನಂತರ ನಟನೆಯಿಂದ ದೂರ ಉಳಿದರು. ಅವರು ʼಪುಷ್ಕಕ್‌ʼ,ʼಶಾಹೆನ್‌ ಶಾʼ, ʼರಖ್ವಾಲಾʼ, ʼದಿಲ್‌ವಾಲೆʼ, ʼರಾಜಾ ಬಾಬುʼ ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!