Thursday, March 30, 2023

Latest Posts

ಈ ದೇಶದಲ್ಲಿ ಬೆಳಗಿನ ಜಾವ 5:30ಗೆ ಸ್ಕೂಲ್ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಶಾಲೆ ಒಂಬತ್ತು ಅಥವಾ 10 ಗಂಟೆಗೆ ಆರಂಭವಾಗುತ್ತದೆ, ಹೆಚ್ಚಂದ್ರೆ ಕೆಲ ಶಾಲೆಗಳಲ್ಲಿ ಎಂಟು ಗಂಟೆಗೆ ಶಾಲೆ ಆರಂಭವಾಗಿಬಿಡುತ್ತದೆ, ಟ್ರಾಫಿಕ್ ಸಮಸ್ಯೆ ತಪ್ಪಿಸೋಕೆ ಬೇಗ ಶಾಲೆ ಆರಂಭಿಸಿ, ಬೇಗ ಮುಗಿಸೋದುಂಟು! ಆದರೆ ಈ ದೇಶದಲ್ಲಿ ಬೆಳಗ್ಗೆ 5:30ಯಿಂದಲೇ ಶಾಲೆ ಶುರು, ನಾಲ್ಕು ಗಂಟೆಗೆ ಮಕ್ಕಳು ಎದ್ದು, ಸ್ನಾನ ಮುಗಿಸಿ ರೆಡಿಯಾಗಿ ಶಾಲೆಗೆ ಬರಬೇಕಿದೆ.

ಈ ದೇಶದಲ್ಲಿ ಬೆಳಗ್ಗೆ 5.30ಗೆ ಶಾಲೆಗಳು ಆರಂಭವಾಗುತ್ತೆ, ಮಕ್ಕಳು 4 ಗಂಟೆಗೆ ಎದ್ದು ಕಣ್ಣುಜ್ಜುತ್ತಲೇ ಶಾಲೆಗೆ ಬರ್ತಾರೆಶಾಲೆಯ ಬಸ್ ಇದ್ದರೆ ಸರಿ, ಇಲ್ಲವಾದರೆ ಮನೆಯವರೇ ಗಾಡಿಯಲ್ಲಿ ಶಾಲೆಗೆ ಬಿಡಬೇಕು, ಹಾಗಾಗಿ ಅವರೂ ಬೇಗ ಏಳಬೇಕು,ಎಲ್ಲರ ಬಳಿಯೂ ವಾಹನದ ವ್ಯವಸ್ಥೆ ಇರೋದಿಲ್ಲ ಅಂತವರ ಕಥೆ?

Are Sleepy Students Learning? | TEACHERWISEಇಂಡೋನೇಷ್ಯಾದ ಕುಪಂಗ್‌ನಲ್ಲಿ ಈ ನಿಯಮ ಜಾರಿಯಾಗಿದೆ, ಮಕ್ಕಳು ಬೇಸಿಗೆಯಲ್ಲಿ ಹೆಚ್ಚು ಆಲಸಿಯಾಗ್ತಾರೆ, ಓದುಬರಹದ ಕಡೆ ಗಮನ ಕಡಿಮೆಯಾಗುತ್ತದೆ. ಹಾಗಾಗಿ ಬೇಗ ಎದ್ದರೆ ಓದಿನಲ್ಲಿ ಮುಂದಿರುತ್ತಾರೆ ಅನ್ನೋದು ಶಾಲೆಗಳ ಉದ್ದೇಶವಾಗಿದೆ.

Optimal Back to School Sleep Schedules for Students [by Age]ಆದರೆ ಪೋಷಕರು, ಮಕ್ಕಳು ಇದರಿಂದ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ, ನಿದ್ದೆಗಣ್ಣಿನಲ್ಲಿಯೇ ಇರುತ್ತಾರೆ, ಚಳಿಗೆ ಸ್ನಾನ ಮಾಡೋದಕ್ಕೆ ಇಷ್ಟಪಡೋದಿಲ್ಲ, ಊಟ, ತಿಂಡಿ ಸರಿಯಾಗ್ತಿಲ್ಲ.ಮಧ್ಯಾಹ್ನ ಶಾಲೆಯಿಂದ ಬಂದು ಮಲಗಿಬಿಡ್ತಾರೆ, ಬೇರೆ ಯಾವ ಚಟುವಟಿಕೆಯಲ್ಲೂ ಮಕ್ಕಳಿಗೆ ಆಸಕ್ತಿಯೇ ಇಲ್ಲ, ಸದಾ ಟೈಯರ್ಡ್ ಆಗಿರುತ್ತಾರೆ ಎಂದು ಪೋಷಕರು ಕಂಪ್ಲೆಂಟ್ ಮಾಡ್ತಿದ್ದಾರೆ! ಪೋಷಕರ ಮನವಿಗೆ ಶಾಲೆಗಳು ನಿರ್ಧಾರ ಬದಲು ಮಾಡ್ತಾರಾ? ಕಾದುನೋಡಬೇಕಿದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!