ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಹಿರಿಯ ನಟಿ ಆಶಾ ಶರ್ಮಾ (88) ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಈ ವಿಷಯವನ್ನು ಸಿನಿ ಮತ್ತು ಕಿರುತೆರೆ ಕಲಾವಿದರ ಸಂಘ ತನ್ನ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ.ಆದರೆ ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅಭಿನಯದ ‘ದೋ ದಿಶಾಯೀನ್’ ಚಿತ್ರದಲ್ಲಿ ಆಶಾ ಶರ್ಮಾ ಅಮೋಘವಾಗಿ ಅಭಿನಯಿಸಿದ್ದರು. ಅವರು ತಾಯಿ ಮತ್ತು ಅಜ್ಜಿಯ ಪಾತ್ರಗಳೊಂದಿಗೆ ಅಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ಮುದ್ರೆ ಹಾಕಿದ್ದಾರೆ.
ಬೆಳ್ಳಿತೆರೆಯಲ್ಲಿ ಮಜೆಕುಚ್ ಕೆಹಾನಾ ಹೈ, ಪ್ಯಾರ್ ತೋ ಹಿನಾ ಹೋ ಥಾ, ಹಮ್ ತುಮ್ಹಾರೆ ಹೈ ಸನಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದಾರೆ. ಹಲವು ಸ್ಟಾರ್ ಹೀರೋ ಚಿತ್ರಗಳಲ್ಲಿ ನಟಿಸಿದ್ದಾರೆ. ಆಶಾ ಶರ್ಮಾ ಕೊನೆಯದಾಗಿ ಪ್ರಭಾಸ್ ಮತ್ತು ಕೃತಿಸನನ್ ಅಭಿನಯದ ‘ಆದಿಪುರುಷ’ ಚಿತ್ರದಲ್ಲಿ ನಟಿಸಿದ್ದರು. ಆಕೆಯ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.