ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಬಾರ್ಮರ್ನಿಂದ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪೊಲೀಸರು ಭಾನುವಾರಬಂಧಿಸಿದ್ದಾರೆ.
ಖರೋಡಿ ಜಿಲ್ಲೆಯ ಪಾಕಿಸ್ತಾನದ ಆಕ್ಲಿ ಗ್ರಾಮದ ನಿವಾಸಿ ಎಂದು ಹೇಳಿಕೊಂಡ ಜಗ್ಸಿ ಕೋಲಿಯನ್ನು (21) ಬಾರ್ಮರ್‌ನ ಸೆಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ನಯಾ ತಾಲ್ ಗಡಿ ಪೋಸ್ಟ್‌ನಿಂದ ಬಂಧಿಸಲಾಗಿದೆ.
ಶನಿವಾರ ಮಧ್ಯರಾತ್ರಿ ಪಾಕಿಸ್ತಾನದಿಂದ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಾನೆ. ದಿನನಿತ್ಯದ ಗಸ್ತು ಮತ್ತು ಕಣ್ಗಾವಲು ತಪಾಸಣೆಯ ಸಮಯದಲ್ಲಿ ಅಧಿಕಾರಿಗಳಿಗೆ ಆತನ ಹೆಜ್ಜೆ ಗುರುತು ಸುಳಿವು ನೀಡಿದೆ. ಹೆಜ್ಜೆ ಗುರುತನ್ನು ಹಿಂಬಾಲಿಸಿದ ಬಿಎಸ್‌ಎಫ್ ಅಧಿಕಾರಿಗಳಿಗೆ ಸೆಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಜಡ್ಪಾ ಗ್ರಾಮದಲ್ಲಿ ಆತ ಸಿಕ್ಕಿಹಾಕಿಕೊಂಡಿದ್ದಾನೆ.
ಶಂಕಿತ ಪಾಕಿಸ್ತಾನಿ ಪ್ರಜೆಯ ಬಂಧನವನ್ನು ಚೋಹ್ತಾನ್‌ನ ಸರ್ಕಲ್ ಆಫೀಸರ್ ಕೃತಿಕಾ ಯಾದವ್ ದೃಢಪಡಿಸಿದ್ದಾರೆ. ಬಿಎಸ್‌ಎಫ್‌ನಿಂದ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ. ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.