ದಣಿದು ಮಂಕಾಗಿದ್ದ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಂತು ಕಿಚ್ಚನ ಕೈರುಚಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡ ಬಿಗ್ ಬಾಸ್ ಸಾಕಷ್ಟು ಕುತೂಹಲ ಮೂಡಿಸಿದೆ. ಹಳೆಯ ಸ್ಪರ್ಧಿಗಳ ಜತೆ ಹೊಸ ಸ್ಪರ್ಧಿಗಳು ಬೆರೆತಿದ್ದು, ದಿನೇ ದಿನೇ ಜಗಳ, ಪ್ರೀತಿ, ಮಾತುಕತೆ ನಡೆಯುತ್ತಿರುವುದು.

ಇದರ ನಡುವೆ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಅವರು ಮನೆ ಸದಸ್ಯರಂತೆ ನೋಡುತ್ತಾರೆ. ಬಿಗ್ ಬಾಸ್​ನಿಂದ ಹೊರ ಬಂದ ನಂತರವೂ ಸ್ಪರ್ಧಿಗಳ ಜತೆ ಒಳ್ಳೆಯ ಬಾಂಧವ್ಯವನ್ನು ಅವರು ಮುಂದುವರಿಸುತ್ತಾರೆ.

ಕೆಲ ಸೀಸನ್​ಗಳಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿದ್ದರು. ಈ ಬಾರಿಯೂ ಅದು ಮುಂದುವರಿದೆ. ಈ ಬಾರಿ ಅವರು ಸ್ಪರ್ಧಿಗಳಿಗೆ ವಿವಿಧ ಬಗೆಯ ಅಡುಗೆ ಮಾಡಿ ಕಳುಹಿಸಿದ್ದಾರೆ.

 

ಕಿಚ್ಚ ಸುದೀಪ್ ಅವರು ಕಿಚನ್​ನಲ್ಲಿ ಅಡುಗೆ ಮಾಡುತ್ತಿರುವುದು, ಮಾಡಿದ ಅಡುಗೆಯನ್ನು ಮನೆಯವರಿಗೆ ಕಳುಹಿಸಿದ್ದು, ಮನೆ ಮಂದಿ ಅದನ್ನು ಸವಿದು ರಿಯಾಕ್ಷನ್ ನೀಡಿದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸ್ಪರ್ಧಿಗಳಂತೂ ಕಿಚ್ಚನ ಕೈರುಚಿ ಸವಿದು ಸಖತ್ ಖುಷಿಪಟ್ಟಿದ್ದಾರೆ.

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಆಟದಿಂದ ಎಲ್ಲರೂ ದಣಿದಿದ್ದಾರೆ. ಅಲ್ಲದೆ, ಮನೆಯಲ್ಲಿ ದಿನಸಿ ಕಡಿಮೆ ಇತ್ತು. ಇದು ಸ್ಪರ್ಧಿಗಳ ಚಿಂತೆ ಹೆಚ್ಚಿಸಿತ್ತು. ಇದರ ನಡುವೆ ಕಿಚ್ಚ ಸುದೀಪ್ ಅವರ ಕೈರುಚಿ ಸವಿಯುವ ಅವಕಾಶ ಸ್ಪರ್ಧಿಗಳಿಗೆ ಸಿಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!