ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂನ ಹಿರಿಯ ನಟಿ ಕವಿಯೂರ್ ಪೊನ್ನಮ್ಮ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕವಿಯೂರ್ ಪೊನ್ನಮ್ಮ ಕೇರಳದ ಕೊಚ್ಚಿಯಲ್ಲಿ ಕೊನೆಯುಸಿರೆಳೆದರು.
ರಂಗಭೂಮಿಯಲ್ಲಿ ನಟಿಸುವ ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಕವಿಯೂರ್ ಅವರು 1000 ಚಿತ್ರಗಳಲ್ಲಿ ನಟಿಸಿದ್ದರು. ಮೋಹನ್ ಲಾಲ್, ನಸೀರ್ ಮತ್ತು ಮಮ್ಮುಟ್ಟಿ ಅವರಂತಹ ದಿಗ್ಗಜ ನಟರಿಗೆ ತಾಯಿ ಪಾತ್ರದಲ್ಲಿ ನಟಿಸುವ ಮೂಲಕ ಮಲಯಾಳಂ ಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದರು.
ಕವಿಯೂರ್ ಪೊನ್ನಮ್ಮ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿನಾಲ್ಕು ಬಾರಿ ಕೇರಳ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಥನಿಯಾವರ್ತನಂ, ಭಾರತಂ ಮತ್ತು ಸುಕೃತಂ ಮುಂತಾದ ಯೋಜನೆಗಳಲ್ಲಿ ಕಾಣಿಸಿಕೊಂಡರು.