ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ‘ಪಿಎಂ ವಿಶ್ವಕರ್ಮ’ ಕಾರ್ಯಕ್ರಮದ ಪ್ರದರ್ಶನದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಪಾವತಿಯ ಮೂಲಕ ಭಗವಾನ್ ಜಗನ್ನಾಥನ ಅದ್ಭುತ ವಿಗ್ರಹವನ್ನು ಖರೀದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಗನ್ನಾಥನ ಕಲಾಕೃತಿಯನ್ನು ಖರೀದಿಸಿ , ಯುಪಿಐ ಮೂಲಕ ಕ್ಯೂಆರ್ ಕೋಡ್ ಬಳಸಿ ಡಿಜಿಟಲ್ ಪಾವತಿ ಮಾಡಿದರು. ಈ ಮೂಲಕ ಡಿಜಿಟಲ್ ಗೆ ಪ್ರೋತ್ಸಾಹಿಸಿದರು.