ಹಿರಿಯ ಮರಾಠಿ ನಟ ಸುನಿಲ್ ಶೆಂಡೆ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಮರಾಠಿ ನಟ ಸುನಿಲ್ ಶೆಂಡೆ ಅವರು ಇಂದು ತಮ್ಮ ನಿವಾಸದಲ್ಲಿ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿದ್ದು, ಅವರು ಪತ್ನಿ ಜ್ಯೋತಿ ಮತ್ತು ಇಬ್ಬರು ಪುತ್ರರಾದ ಓಂಕಾರ್ ಮತ್ತು ಹೃಷಿಕೇಶ್ ಅವರನ್ನು ಅಗಲಿದ್ದಾರೆ.
ಈ ಕುರಿತು ಟ್ವಿಟರ್ ಬಳಕೆದಾರ ಪವನ್ ಝಾ ನಿಧನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಲವಾರು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಸುನಿಲ್ ಶೆಂಡೆ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಾದ ವಾಸ್ತಾವ್, ಸರ್ಫರೋಶ್, ಗಾಂಧಿ, ಆಯಿ, ಜೋಡಿದಾರ್, ನಿಡಾನ್, ಜಮ್ಲಾ ಹೋ ಜಮ್ಲಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!