ಹಿರಿಯ ತಮಿಳು ಗಾಯಕಿ ಉಮಾ ರಮಣನ್ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳು ಚಿತ್ರರಂಗದ ಹೆಸರಾಂತ ಗಾಯಕಿ ಉಮಾ ರಮಣನ್ ಇಂದು ನಿಧನ ಹೊಂದಿದ್ದಾರೆ.

ಅವರಿಗೆ 72 ವರ್ಷ ವಯಸ್ಸಾಗಿತ್ತು. ತಮಿಳು ಸಿನಿಮಾಗಳಲ್ಲಿ ಹಲವು ಮೆಲೋಡಿ ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗೆ ಇದೆ. ಅವರ ಪತಿ ಅವಿ ರಮಣನ್ ಅವರು ಖ್ಯಾತ ಗಾಯಕರು. ಉಮಾ ಅವರ ನಿಧನಕ್ಕೆ ಕಾರಣ ಈವರೆಗೂ ತಿಳಿದುಬಂದಿಲ್ಲ.

ಒಟ್ಟಾರೆ ಸಂಗೀತ ಕ್ಷೇತ್ರಕ್ಕೆ  35 ವರ್ಷಗಳನ್ನು ಮುಡಿಪಾಗಿಟ್ಟಿದ್ದ ಉಮಾ ಅವರು ತಮ್ಮ ಅವಧಿಯಲ್ಲಿ 6000ಕ್ಕೂ ಅಧಿಕ ಕಾನ್ಸರ್ಟ್​ಗಳಲ್ಲಿ ಹಾಡಿದ್ದಾರೆ. ಎವಿ ರಮಣನ್ ಅವರನ್ನು ಭೇಟಿ ಮಾಡಿದ ನಂತರ ಇಬ್ಬರೂ ಜಂಟಿಯಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಇಳಯರಾಜ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಅವರ ಖ್ಯಾತಿ ಹೆಚ್ಚಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!