Monday, August 8, 2022

Latest Posts

ಉದಯಪುರ ಹಿಂದೂ ಹತ್ಯೆ ಖಂಡಿಸಿ ವಿಎಚ್‌ಪಿ ಪ್ರತಿಭಟನೆ

ಹೊಸದಿಗಂತ ವರದಿ ಕಲಬುರಗಿ: 

ಜಿಹಾದಿ ಮಾನಸಿಕತೆಯುಳ್ಳ ಮುಸ್ಲಿಂ ಸಮುದಾಯವು ಎಂದಿಗೂ ಶಾಂತಿಪ್ರಿಯವಾದ ಸಮುದಾಯವಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕಾರಿಣಿ ಸದಸ್ಯ ಶೇಷಾದ್ರಿ ಕುಲಕರ್ಣಿ ಹೇಳಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ, ಮಾನವ ಸರಪಳಿ ನಿಮಿ೯ಸಿ, ಪ್ರತಿಕೃತಿ ದಹನ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 24 ಹಿಂದೂ ಯುವಕರ ಕೊಲೆಯಾಗಿವೆ. ಇದಕ್ಕೆ ಮೂಲ ಕಾರಣ ಮುಸ್ಲಿಂ ಜಿಹಾದಿಗಳ ಕ್ರೂರ ಮಾನಸಿಕತೆ ಎಂದರು.70 ವಷ೯ಗಳಿಂದ ನಿರಂತರವಾಗಿ ಭಾರತ ದೇಶ ಮತ್ತು ಹಿಂದೂ ಧಮ೯ವನ್ನು ತಿನ್ನುವ ಕೆಲಸ ಕಾಣದ ಕೈಗಳಿಂದ ನಡೆಯುತ್ತಿದೆ ಎಂದು ರಾಜಸ್ತಾನ ಸಕಾ೯ರದ ವಿರುದ್ಧ ಆಕ್ರೋಶ ಹೊರಹಾಕಿದರು.

100 ತಪ್ಪುಗಳವರೆಗೂ ನಾವು ಹಿಂದೂಗಳು ಶಾಂತಿ ಪ್ರೀಯರಾಗಿರುತ್ತೇವೆ.101 ಆದರೆ ಹಿಂದೂ ಸುಮ್ಮನಿರುವುದಿಲ್ಲ. ಸನಾತನ ವಿರೋಧಿಗಳಿಗೆ ಈ ದೇಶದಲ್ಲಿ ರಾಜಕೀಯ ಮಾಡಲು ಬಿಡುವುದಿಲ್ಲ. ಧರ್ಮ ವಿರೋಧಿಗಳನ್ನು ಹುಡುಕಿ ಮಟ್ಟ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿ.ಎಚ್.ಪಿ.ನಗರ ಕಾಯ೯ದಶಿ೯ ಶಿವರಾಜ್ ಸಂಗೋಳಗಿ ಮಾತನಾಡಿ, ಹಿಂದೂ ಯುವಕನ ಹಾಡುಹಗಲೇ ಹತ್ಯೆ ಮಾಡಿದ ಜಿಹಾದಿ ಮುಸ್ಲಿಮರು ತದನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಹಿಂದೂ ಸಮಾಜಕ್ಕೆ ಬೆದರಿಕೆ ವಿಡಿಯೋ ಬಿಟ್ಟಿದ್ದು, ದೇಶದ ಸಾವ೯ಭೌಮತೆಗೆ ಸವಾಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss