ಹೊಸ ದಿಗಂತ ವರದಿ, ಪುತ್ತೂರು:
ಹಿಂದು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ವಿಶ್ವ ಹಿಂದೂ ಪರಿಷತ್ ಯಾವಾಗಲೂ ವಿರೋಧಿಸುತ್ತಾ ಬಂದಿದೆ. ಸೌಜನ್ಯ ಪ್ರಕರಣದಲ್ಲೂ ನ್ಯಾಯಕ್ಕಾಗಿ ವಿಹಿಂಪ ಆಗ್ರಹಿಸುತ್ತಲೇ ಬಂದಿದೆ.
ಆದರೆ, ಹಿಂದು ಧರ್ಮದ ವಿಚಾರಗಳನ್ನು ವಿರೋಧಿಸುವ ಸಲುವಾಗಿ ಯಾವುದೇ ದುರಂತ ಘಟನೆಯನ್ನು ಆಧಾರವಾಗಿರಿಸಿಕೊಂಡು ಅನ್ಯಮತೀಯರು ಹಾಗೂ ಧರ್ಮವಿರೋಧಿ ಎಡಪಂಥೀಯರು ಟೂಲ್ ಕಿಟ್ ಮಾದರಿಯಲ್ಲಿ ಬಳಸಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ ಹಾಗೂ ವಿಶ್ವ ಹಿಂದೂ ಪರಿಷದ್ ಅಂತಹ ಹುನ್ನಾರಗಳನ್ನು ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.