ಹೊಸದಿಗಂತ ಡಿಜಿಟಲ್ ಡೆಸ್ಕ್:
ಝೊಮಾಟೊ ಡೆಲಿವರಿ ಬಾಯ್ ಮತ್ತು ಸೆಕ್ಯುರಿಟಿ ಗಾರ್ಡ್ ನಡುವೆ ಹೌಸಿಂಗ್ ಸೊಸೈಟಿಗೆ ಪ್ರವೇಶಿಸುವ ವಿಚಾರಕ್ಕೆ ಗಲಾಟೆಯಾಗಿ ಮಾರಾಮಾರಿ ನಡೆದಿದೆ. ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಹೌಸಿಂಗ್ ಸೊಸೈಟಿಗೆ ಜೊಮಾಟೊ ಡೆಲಿವರಿ ಬಾಯ್ ಆಹಾರ ತಲುಪಿಸಲು ಹೋಗಿದ್ದರು.
ಆದರೆ, ಅಲ್ಲಿನ ಭದ್ರತಾ ಸಿಬ್ಬಂದಿ ಅವರನ್ನು ಸೊಸೈಟಿಯೊಳಗೆ ಬಿಡದೆ ಗೇಟ್ ಬಳಿ ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜೊಮಾಟೊ ಡೆಲಿವರಿ ಬಾಯ್ ಸೆಕ್ಯೂರಿಟಿ ಗಾರ್ಡ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಜಗಳ ಹೆಚ್ಚಾಗಿ ಪರಸ್ಪರ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಪ್ರತಿಕ್ರಿಯಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ ಎಂದು ಡಿಸಿಪಿ ಅಶುತೋಷ್ ದ್ವಿವೇದಿ ತಿಳಿಸಿದ್ದಾರೆ.
@zomato delivery boy and security guard were fiercely assaulted over the entry in #Garden_Glory_Society of Noida.
The whole incident was caught in the #CCTV camera installed in the society, Noida Police Station Sector 39 area. pic.twitter.com/b0CVFTarXw
— Satya Tiwari (@SatyatTiwari) October 9, 2022