VIRAL VIDEO| ವಿದೇಶಿ ಮಹಿಳೆ ಸಾಫ್ಟ್..ಸಾಫ್ಟ್‌ ಚಪಾತಿ ಮಾಡುವ ವಿಧಾನ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಪಾತಿ ಸಾಫ್ಟ್‌ ಸಾಫ್ಟ್‌ ಆಗಿ ಬರಬೇಕೆಂದರೆ ಅಮ್ಮಂದಿರು ವಿವಿಧ ಪ್ರಯೋಗಗಳನ್ನು ಮಾಡುತ್ತಾರೆ. ಮೊಸರು ಹಾಕಿ ಹಿಟ್ಟು ಕಲಸುವುದೋ ಅಥವಾ ಎರಡು ಮೂರು ಗಂಟೆ ನೆನೆಸಿಟ್ಟು ಚೆನ್ನಾಗಿ ನಾದಿ ಚಪಾತಿ ಮೃದುವಾಗುವಂತೆ ಮಾಡುತ್ತಾರೆ. ಹಾಗೆಯೇ ವಿದೇಶಿ ಮಹಿಳೆಯೊಬ್ಬರು ಇನ್ನೊಂದು ವಿಧಾನವನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾರತೀಯ ಪಾಕಪದ್ಧತಿಯ ಅದ್ಭುತಗಳು ಪ್ರಪಂಚದಾದ್ಯಂತದ ಸಮುದಾಯಗಳಿಗೆ ಹರಡುತ್ತಿವೆ. ವಿದೇಶಿಗರೂ ನಮ್ಮ ಖಾದ್ಯಗಳನ್ನು ಗುರುತಿಸುತ್ತಿದ್ದಾರೆ. ಭಾರತೀಯರನ್ನು ಮದುವೆಯಾಗಿರುವ ಆಂಡ್ರಿಯಾ ಎಂಬ ಮಹಿಳೆ ಚಪಾತಿ ಹಿಟ್ಟಿಗೆ ಒಂದು ಪದಾರ್ಥವನ್ನು ಸೇರಿಸಬಹುದು ಎಂದು ವೀಡಿಯೊದಲ್ಲಿ ತೋರಿಸಿದ್ದಾರೆ. ಈ ಕ್ಲಿಪ್ ವೈರಲ್ ಆಗಿದ್ದು ಮಾತ್ರವಲ್ಲದೆ ಇಂಟರ್ನೆಟ್ ಬಾಣಸಿಗರು ಮತ್ತು ಭಾರತೀಯ ಅಡುಗೆಯವರನ್ನೂ ಆಕರ್ಷಿಸಿತು.

@we_coffeemilkfamily ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಚಪಾತಿಯನ್ನು ಮೃದುಗೊಳಿಸಲು ಆಂಡ್ರಿಯಾ ಆವಕಾಡೊವನ್ನು ಹಿಟ್ಟಿನಲ್ಲಿ ಬೆರೆಸಿದರು. ಹೀಗೆ ಮಾಡುವುದರಿಂದ ರೊಟ್ಟಿ ಮೃದುವಾಗುತ್ತದೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ರೊಟ್ಟಿ ಸ್ಮೂತ್ ಆಗಿ ಬರಲು ತಮಗೆ ತಿಳಿದಿರುವ ಸಲಹೆಗಳನ್ನು ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!