ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರೊಬ್ಬರು ಆಡಿ ಕಾರಿನಲ್ಲಿ ಮಾರುಕಟ್ಟೆಗೆ ಬಂದು ರಸ್ತೆ ಬದಿ ತರಕಾರಿ ಮಾರುತ್ತಿರುವ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಇನ್ಸ್‌ಸ್ಟಾಗ್ರಾಂನಲ್ಲಿ variety_farmer ಖಾತೆಗೆ ಹೋದರೆ, ರೈತ ಸುಜಿತ್ ಅವರ ವೀಡಿಯೊಗಳು ಕಂಡುಬರುತ್ತವೆ. ಸುಜಿತ್ ಅವರ ವೀಡಿಯೊಗಳು ಜನರನ್ನು ಆಕರ್ಷಿಸುತ್ತಲೇ ಇರುತ್ತವೆ. ಇತ್ತೀಚೆಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸುಜಿತ್ ತನ್ನ ಜಮೀನಿನಲ್ಲಿ ಬೆಳೆದ ಸೊಪ್ಪನ್ನು ತನ್ನ ಐಷಾರಾಮಿ ಕಾರಿನಲ್ಲಿ ಮಾರುಕಟ್ಟೆಗೆ ತರುತ್ತಿರುವುದನ್ನು ಕಾಣಬಹುದು. ಬಳಿಕ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸೊಪ್ಪು ಮಾರಾಟ ಮುಗಿಸಿ ಅಲ್ಲಿಂದ ಹೊರಡುತ್ತಾನೆ.
ಸುಜಿತ್ ಅವರ ವೀಡಿಯೊ 6 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ನೆಟ್ಟಿಗರು ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅವರಲ್ಲೊಬ್ಬ, ‘ಎಲ್ಲ ರೈತರ ಮಕ್ಕಳೂ ಭಾರತದಲ್ಲಿ ಹೀಗೆಯೇ ನೆಲೆ ನಿಲ್ಲಬೇಕು.. ತಾಜಾ ತರಕಾರಿ ಬೆಳೆದು ಮಾರಬೇಕು.. ಗೌರವ ಕೊಡಬೇಕುʼ. ನಿಮಗೆ ಏನು ಅನ್ನಿಸುತ್ತದೋ ಅದನ್ನು ಮಾಡು, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ದುಡಿದರೆ, ಯಶಸ್ಸು ಖಂಡಿತಾ ಸಿಗುತ್ತದೆ ಎಂಬ ಕಮೆಂಟ್‌ಗಳು ವೈರಲ್ ಆಗುತ್ತಿವೆ.