SHOCKING VIDEO| ಕಾರು ನಿಲ್ಲಿಸಿ ಎಂದು ಕಿರುಚಿದರೂ ಕೇಳದೆ ಮಹಿಳೆಯನ್ನು ಎಳೆದೊಯ್ದ ಕಾರು ಚಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾರಿನ ಬ್ಯಾನೆಟ್‌ ಮೇಲೆ ಮನುಷ್ಯರನ್ನು ಎಳೆದೊಯ್ಯುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇಂಥಹದ್ದೇ ಮತ್ತೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಹನುಮಾನ್‌ಗಢ ಮುಖ್ಯ ಬಸ್ ನಿಲ್ದಾಣದ ಬಳಿ ಕಾರು ಚಾಲಕನೊಬ್ಬ ಮಹಿಳೆಯನ್ನು ಕಾರಿನ ಬ್ಯಾನೆಟ್‌ ಮೇಲೆ ಎಳೆದೊಯ್ದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚಾಲಕ ಆಕೆಯನ್ನು 500 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ರಸ್ತೆಯಲ್ಲಿದ್ದ ಜನ ಆಕೆಯನ್ನು ಕಾಪಾಡಲು ಕಾರಿನ ಹಿಂದೆ ಓಡಿದರೂ ಚಾಲಕ ಕಾರು ನಿಲ್ಲಿಸದೆ ಉದ್ಧಟತನ ಮೆರೆದಿದ್ದಾನೆ. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಇದು ರಾವ್ಲಾ ನಿವಾಸಿಗೆ ಸೇರಿದ ಕಾರು ಎಂದು ಗುರುತಿಸಿದ್ದಾರೆ. ಕಾರು ಚಾಲಕನಿಗಾಗಿ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ.

ಈ ಘಟನೆಯ ವಿಡಿಯೋವನ್ನು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜ್ಯವರ್ಧನ್ ಸಿಂಗ್ ರಾಥೋಡ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಸ್ಥಾನದ ಹನುಮಾನ್‌ಗಢದಲ್ಲಿ ಹಗಲು ಹೊತ್ತಿನಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಈ ರೀತಿ ಎಳೆದೊಯ್ದಿದ್ದಾರೆ. ಸಿಎಂ ಗೆಹ್ಲೋಟ್ ಅವರೇ ನಿಮ್ಮ ಆಡಳಿತದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಿವೆ ಎಂದು ನಿಮಗೆ ತಿಳಿದಿದೆಯೇ?’ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!