ವಿದ್ಯುತ್‌ ಕಂಬದ ಮೇಲೆ ಯುವತಿಯ ಏರೋಬಿಕ್ಸ್: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿದ್ಯುತ್ ಇಲಾಖೆಯಲ್ಲಿ ಮಹಿಳೆಯೊಬ್ಬರು ಲೈನ್ ವುಮನ್ ಆಗಿ ಆಯ್ಕೆಯಾಗಿ ವಿದ್ಯುತ್ ಕಂಬಗಳನ್ನು ಹತ್ತಿದ್ದನ್ನು ಕಂಡು ಹೆಮ್ಮೆ ಪಟ್ಟಿದ್ದೇವೆ. ಆದರೆ ಮಹಿಳೆಯೊಬ್ಬರು ವಿದ್ಯುತ್ ಕಂಬ ಹಿಡಿದು ಏರೋಬಿಕ್ಸ್ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಯಾವ ದೇಶದಲ್ಲಿ ನಡೆದಿದೆ ಎಂಬುದು ತಿಳಿದಿಲ್ಲ ಆದರೆ ನೆಕ್ಸ್ಟ್ ಲೆವೆಲ್ ಸ್ಕಿಲ್ಸ್ ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಪ್ಪು ವಸ್ತ್ರ ಧರಿಸಿದ್ದ ಮಹಿಳೆಯೊಬ್ಬಳು ತನ್ನ ಹೈ ಹೀಲ್ಸ್ ತೆಗೆದು ಬೀದಿ ದೀಪದ ಕಂಬವನ್ನು ಹತ್ತಿ ಏರೋಬಿಕ್ಸ್ ಮಾಡಿದ್ದಾರೆ.

ಈ ವೀಡಿಯೋ ನೆಟ್ಟಿಗರ ಪ್ರತಿಕ್ರಿಯೆಯೂ ಇದೆ. ಆಕೆ ರಿಸ್ಕ್ ತೆಗೆದುಕೊಳ್ಳುತ್ತಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡಿದರೆ, ಕೆಲವರು ಮಹಿಳೆಯ ಧೈರ್ಯ ಮತ್ತು ಶಕ್ತಿಯನ್ನು ಕೊಂಡಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!