September 16, 2026
Wednesday, September 16, 2026
spot_img

ಬೆಂಗಳೂರಿನಲ್ಲಿ ಜಾಗಿಂಗ್‌ ಮಾಡುವ ಮಹಿಳೆಯರ ವಿಡಿಯೋ ರೆಕಾರ್ಡ್‌: ಸಿಕ್ಕಿಬಿದ್ದವನಿಗೆ ಹಿಗ್ಗಾಮುಗ್ಗ ಥಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಯಾವುದೇ ತಣ್ಣಗಿನ ರೋಡ್‌, ಪಾರ್ಕ್‌ಗಳನ್ನು ಬೆಳಗ್ಗೆ ವಿಸಿಟ್‌ ಮಾಡಿದ್ರೆ ಅಲ್ಲಿ ಹತ್ತಾರು ಮಂದಿ ಜಾಗಿಂಗ್‌ ಮಾಡೋ ದೃಶ್ಯವನ್ನು ಸಾಮಾನ್ಯವಾಗಿ ನೋಡಿಯೇ ಇರ್ತೀರಿ. ಜಾಗಿಂಗ್‌ ಬಟ್ಟೆಗಳಲ್ಲಿ ಓಡುವಾಗ ಹಿಂಬದಿಯಿಂದ ವಿಡಿಯೋ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡಿದ್ದು, ಮಹಿಳೆಯರೇ ಆತನನ್ನು ಹಿಡಿದು ಬಾರಿಸಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.

ರಾತ್ರಿ ಓಡಾಡೋಕೆ ಸೇಫ್‌ ಇಲ್ಲ, ಪಬ್‌ ಹೋದರೆ ಸೇಫ್‌ ಇಲ್ಲ, ಬಸ್‌ ಹತ್ತೋದು ಸೇಫ್‌ ಇಲ್ಲ ಎಂದು ಹೆಣ್ಣುಮಕ್ಕಳಿಗೆ ಗೊತ್ತಾಗುತ್ತದೆ. ಆದರೆ ಬೆಳ್ಳಂಬೆಳಗ್ಗೆ ಜಾಗಿಂಗ್‌ ಹೋಗೋದಕ್ಕೂ ಸೇಫ್ಟಿ ಸಮಸ್ಯೆ ಬರುತ್ತದೆ ಎಂದು ಊಹಿಸೋಕೂ ಸಾಧ್ಯವಿಲ್ಲ! ನೋಡೋಕೆ ವಿದ್ಯಾವಂತನ ಹಾಗೆ ಕಾಣುವ ಗೋಲ್ಡನ್‌ ಕುಮಾರ್‌ ಎಂಬ ಯುವಕ ದಿನವೂ ಬೆಳಗ್ಗೆಯೇ ಪಾರ್ಕಿಗೆ ಬಂದು ವಿಡಿಯೋ ಮಾಡಿದ್ದಾನೆ. ಅಕಸ್ಮಾತ್‌ ಆಗಿ ಮಹಿಳೆಯರ ಕೈಯಲ್ಲಿ ಆತ ಸಿಕ್ಕಿಬಿದ್ದಿದ್ದು ಫೋನ್‌ ಕಸಿದುಕೊಂಡಿದ್ದಾರೆ.

ನಂತರ ಫೋನ್‌ನಲ್ಲಿ ವಿಡಿಯೋಗಳು ಕಾಣಿಸಿದ್ದು, ಹುಡುಗಿಯರು ಗರಂ ಆಗಿದ್ದಾರೆ. ಯಾಕೆ ರೆಕಾರ್ಡ್‌ ಮಾಡಿದ್ದೀಯ ಎಂದು ಜೋರಾಗಿ ಕೇಳಿದ್ದಾರೆ. ಆಗ ಅಕ್ಕಪಕ್ಕದ ಜನರೂ ಆಗಮಿಸಿ ವಿಷಯ ತಿಳಿದುಕೊಂಡು ಒಂದೆರಡು ಬಾರಿಸಿದ್ದಾರೆ. ವಿಡಿಯೋ ಮಾಡಿದ ತಕ್ಷಣವೇ ಆತ ತನ್ನ ಸ್ನೇಹಿತರಿಗೆ ಅದನ್ನು ಫಾರ್ವರ್ಡ್‌ ಮಾಡಿದ್ದಾನೆ. ತದನಂತರ ಹೆದರಿದ ಗೋಲ್ಡನ್‌ ಕುಮಾರ್‌ ಮಹಿಳೆಯರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಆದರೆ ವಿಡಿಯೋ ಎಲ್ಲೆಲ್ಲಿಗೆ ಫಾರ್ವರ್ಡ್‌ ಆಗಿದೆ ಎನ್ನುವ ಭಯದಿಂದ ಮಹಿಳೆಯರು ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !