ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸ್ವಿಫ್ಟ್ ಎಂಬ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಪಾವತಿ ವ್ಯವಸ್ಥೆಯನ್ನು ರಷ್ಯದ ವಿತ್ತಸಂಸ್ಥೆಗಳಿಗೆ ನಿರ್ಬಂಧಿಸಿರುವ ಯುರೋಪ್ ಮತ್ತು ಅಮೆರಿಕಗಳು ಇದನ್ನು ಮಾಸ್ಟರ್ ಸ್ಟ್ರೋಕ್ ಎಂಬರ್ಥದಲ್ಲಿ ವ್ಯಾಖ್ಯಾನಿಸುತ್ತಿವೆ. ಇದರಿಂದ ರಷ್ಯ ತನ್ನ ರಫ್ತು-ಆಮದುಗಳಿಗೆ ಪಾವತಿಸುವುದು ಕಷ್ಟವಾಗುತ್ತದೆ ನಿಜ. ಆದರೆ, ವ್ಯವಹಾರಿಕವಾಗಿ ರಷ್ಯವನ್ನವಲಂಬಿಸಿರುವ ಯುರೋಪಿಗೂ ಇದರ ಹೊಡೆತ ಬೀಳುತ್ತದೆ. ಅಲ್ಲದೇ, ಚೀನಾ ಅದಾಗಲೇ ಈ ಬ್ಯಾಂಕಿಂಗ್ ವ್ಯವಸ್ಥೆಗೆ ಪರ್ಯಾಯ ಹುಟ್ಟುಹಾಕಿದ್ದು, ಅದು ರಷ್ಯವನ್ನು ಮತ್ತಷ್ಟು ತನ್ನತ್ತ ಸೆಳೆಯುವುದಕ್ಕೆ ಅನುಕೂಲಕಾರಿ. ವಿಡಿಯೋದಲ್ಲಿದೆ ಸಂಪೂರ್ಣ ವಿವರಣೆ.