Wednesday, June 7, 2023

Latest Posts

VIRAL VIDEO| ಆರದ ಕಿಚ್ಚು: ಗ್ಲೋಬಲ್‌ ಸಮಾವೇಶದಲ್ಲೂ ಶುರುವಾಯ್ತು ರಷ್ಯಾ-ಉಕ್ರೇನ್ ಯುದ್ಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ-ಉಕ್ರೇನ್ ಯುದ್ಧವು ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಈ ಯುದ್ಧದಿಂದಾಗಿ ಉಭಯ ದೇಶಗಳು ಕಡುವೈರಿಗಳಾಗಿ ಬದಲಾಗಿದ್ದು, ಈ ವೈಷಮ್ಯವು ಜನ ಮತ್ತು ರಾಜಕಾರಣಿಗಳ ನಡುವೆಯೂ ಬೆಕಿಯಂತೆ ಕುದಿಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸದ್ಯ ವಿಡಿಯೋವೊಂದು ಹರಿದಾಡುತ್ತಿದೆ. ಜಾಗತಿಕ ಸಮ್ಮೇಳನದಲ್ಲಿ ಉಕ್ರೇನ್ ಸಂಸದರೊಬ್ಬರು ರಷ್ಯಾದ ಪ್ರತಿನಿಧಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ಗ್ಲೋಬಲ್‌ ಸಮಾವೇಶದಲ್ಲಿ ಈ ಘಟನೆ ಜರುಗಿತು.

ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದ ರಷ್ಯಾದ ಪ್ರತಿನಿಧಿಯು ಧ್ವಜವನ್ನು ಎಳೆದಾಗ ಜಗಳ ಆರಂಭವಾದುದನ್ನು ವಿಡಿಯೋದಲ್ಲಿ ಕಾಣಬಹುದು. ಉಕ್ರೇನ್ ಸಂಸದ ಕೋಪಗೊಂಡು ರಷ್ಯಾದ ಪ್ರತಿನಿಧಿಯ ಮುಖಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ಹೋರಾಟ ನಿಲ್ಲಿಸಲು ಅಲ್ಲಿದ್ದವರೆಲ್ಲ ಪ್ರಯತ್ನಿಸಿದ್ದಾರೆ. ಬ್ಲಾಕ್‌ ಸಿ ಎಕನಾಮಿಕ್‌ ಕಮ್ಯುನಿಟಿ 30 ವರ್ಷಗಳ ಹಿಂದೆ ರೂಪುಗೊಂಡ ಸಂಸ್ಥೆಯಾಗಿದೆ. ಇದರ ಸದಸ್ಯ ರಾಷ್ಟ್ರಗಳಾಗಿ ಉಕ್ರೇನ್ ಮತ್ತು ರಷ್ಯಾವನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಈ ಸಂಸ್ಥೆಯನ್ನು ರಚಿಸಲಾಗಿದೆ.

ರಷ್ಯಾ ಅಧ್ಯಕ್ಷರ ಭವನದ ಮೇಲೆ ಡ್ರೋನ್ ದಾಳಿ ನಡೆಸಿ ಅಧ್ಯಕ್ಷ ಪುಟಿನ್ ಅವರನ್ನು ಕೊಲ್ಲಲು ಯತ್ನಿಸಿದ ಒಂದು ದಿನದ ನಂತರ ಟರ್ಕಿಯಲ್ಲಿ ಈ ಘಟನೆ ನಡೆದಿದೆ. ಪುಟಿನ್ ಹತ್ಯೆಯ ಯತ್ನವನ್ನು ಉಕ್ರೇನ್ ಪಿತೂರಿ ಎಂದು ರಷ್ಯಾ ಆರೋಪಿಸಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದು ಖಚಿತ ಎಂದು ರಷ್ಯಾ ಪ್ರಬಲ ಎಚ್ಚರಿಕೆ ನೀಡಿದೆ. ರಷ್ಯಾದ ಪ್ರಮುಖ ನಾಯಕ ಡಿಮಿಟ್ರಿ ಮೆಡ್ವೆಡೆವ್ ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಕೊಲ್ಲುವುದಾಗಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!