Monday, September 25, 2023

Latest Posts

CINE| ಖುಷಿ ಸಿನಿಮಾ ಬಗ್ಗೆ ಆಸಕ್ತಿದಾಯಕ ಪೋಸ್ಟ್ ಹಂಚಿಕೊಂಡ ವಿಜಯ್ ದೇವರಕೊಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸ್ಟಾರ್ ಹೀರೋ ವಿಜಯ್ ದೇವರಕೊಂಡ ಸಾಲು ಸಾಲು ಸಿನಿಮಾಗಳನ್ನು ಅನೌನ್ಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇವರ ‘ಖುಷಿ’ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾ ಬಗ್ಗೆ ಆಸಕ್ತಿದಾಯಕ ಪೋಸ್ಟ್ಅನ್ನು ಮಾಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ʻ8 ದಿನ, 14 ದಿನ, 30 ದಿನʼ ಎಂದು ಟ್ವೀಟ್ ಮಾಡಿದ್ದು, ಹೀಗೆಂದರೇನು ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. 8 ದಿನ ಅಂದರೆ ಟ್ರೇಲರ್ ರಿಲೀಸ್ ಡೇಟ್, 14 ದಿನ ಎಂದರೆ ಏನು? ಅಲ್ಲದೆ 30 ದಿನ ಎಂದರೆ ಸಿನಿಮಾದ ರಿಲೀಸ್ ದಿನಾಂಕ ಇರಬೇಕು. ಈ ಬಗ್ಗೆ ವಿಜಯ್ ಇಂತಹದೊಂದು ಸುಳಿವು ನೀಡಿದ್ದಾರಾ ಎಂಬ ಅನುಮಾನು ವ್ಯಕ್ತಪಡಿಸಿದ್ದಾರೆ. ವಿಜಯ್ ದೇವರಕೊಂಡ ನೀಡಿರುವ ಸುಳಿವಿನ ಪ್ರಕಾರ ಆಗಸ್ಟ್ 9 ರಂದು ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ.

ಈ ಸಿನಿಮಾದ ಮೂಲಕ ವಿಜಯ್ ದೇವರಕೊಂಡ ಮತ್ತು ಸಮಂತಾ ಒಳ್ಳೆಯ ಕ್ರೇಜ್ ಹುಟ್ಟು ಹಾಕಿದ್ದಾರೆ. ಇವರ ಕೆಮಿಸ್ಟ್ರಿಯನ್ನು ತೆರೆ ಮೇಲೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಸೆಪ್ಟೆಂಬರ್ 1 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ಮೇಕರ್‌ಗಳು ಪ್ರಚಾರವನ್ನು ವೇಗಗೊಳಿಸಲು ನೋಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಯಾವಾಗ ಹೊರಬರುತ್ತದೆ ಎಂದು ಅಭಿಮಾನಿಗಳು ತುಂಬಾ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!