ಸತತ 12 ಗಂಟೆ ಇಡಿ ತನಿಖೆ ಬಳಿಕ ವಿಜಯ್ ದೇವರಕೊಂಡ ಹೇಳಿದ್ದೇನು? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ರೌಡಿ ಹೀರೋ ವಿಜಯ್ ದೇವರಕೊಂಡ ಮತ್ತು ಮಾಸ್ ಡೈರೆಕ್ಟರ್ ಪೂರಿ ಜಗನ್ನಾಥ್ ಕಾಂಬಿನೇಷನ್ ನ ‘ಲೈಗರ್’ ಸಿನಿಮಾ ಹಲವು ನಿರೀಕ್ಷೆಗಳ ನಡುವೆ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾಯಿತು. ಅದ್ಧೂರಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರದ ಕಾರಣ ನಿರ್ಮಾಪಕರು ಮತ್ತು ಖರೀದಿದಾರರು ಭಾರೀ ನಷ್ಟ ಅನುಭವಿಸಿದ್ದಾರೆ.

ಇತ್ತೀಚೆಗಷ್ಟೇ ಈ ಸಿನಿಮಾ ವಿತರಕರು ಪರಿಹಾರ ನೀಡುವಂತೆ ಪ್ರತಿಭಟನೆ ಮಾಡಿ ಸುದ್ದಿಯಾಗಿತ್ತು. ಇದೀಗ ಈ ಸಿನಿಮಾ ನಿರ್ಮಾಣಕ್ಕೆ ಕೆಲವು ರಾಜಕಾರಣಿಗಳು ಅಕ್ರಮವಾಗಿ ಹಣ ಹೂಡಿದ್ದು, ವಿದೇಶದಿಂದಲೂ ಆ ವಹಿವಾಟು ನಡೆದಿದೆ ಎಂಬುದನ್ನು ತಿಳಿಯಲು ಇಡಿ ಅಧಿಕಾರಿಗಳು ಚಿತ್ರ ಘಟಕಕ್ಕೆ ನೋಟಿಸ್ ಕಳುಹಿಸಿದ್ದಾರೆ. ಚಿತ್ರ ನಿರ್ಮಾಪಕರಾದ ಪುರಿಜಗನ್ನಾಥ್ ಮತ್ತು ಚಾರ್ಮಿ ಕೂಡಾ ಈ ಮೊದಲು ವಿಚಾರಣೆಗೆ ಹಾಜರಾಗಿದ್ದರು.

ಇದೀಗ ನಿನ್ನೆ ಈ ಚಿತ್ರದ ನಾಯಕ ವಿಜಯ್ ದೇವರಕೊಂಡ ಅವರನ್ನೂ ಇಡಿ ವಿಚಾರಣೆಗೆ ಕರೆದಿದ್ದರು. 12 ಗಂಟೆಗಳ ವಿಚಾರಣೆ ಬಳಿಕ ವಿಜಯ್ ಮಾಧ್ಯಮದವರೊಂದಿಗೆ ಮಾತನಾಡಿ, “ಇದು ಜನಪ್ರಿಯತೆಯ ಕೆಲವು ಅಡ್ಡಪರಿಣಾಮಗಳಲ್ಲಿ ಒಂದಾಗಿದೆ. ಇಡಿ ಅಧಿಕಾರಿಗಳು ನನ್ನನ್ನು ಕರೆದರು ನಾನು ಬಂದಿದ್ದೇನೆ. ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಅದಕ್ಕಿಂತ ಹೆಚ್ಚೇನೂ ಇಲ್ಲ. ಇನ್ನೇನಾದರೂ ಹೇಳಿದರೆ ಅವರು ಫೀಲ್ ಆಗ್ತಾರೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!