ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಸಿನಿಮಾರಗದಲ್ಲಿ ಹೆಸರು ಮಾಡಿರುವ ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆ ವಿಚಾರವಾಗಿ ಹಲವು ಗಾಳಿ ಸುದ್ದಿಗಳು ಕೇಳಿಬರುತ್ತಿದ್ದವು.
ಈಗ ನಟ ವಿಜಯ್ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ʼಎಂದಿನಂತೆ ಅಸ್ಸಂಬದ್ದʼ ಎಂದು ಟ್ವೀಟ್ ಮಾಡುವ ಮೂಲಕ ಮದುವೆ ಕುರಿತ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಒಟ್ಟಾಗಿ ಮಾಡಿದ ಗೀತ ಗೋವಿಂದಂ ಸಿನಿಮಾ ಬಳಿಕ ಹಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಗೋವಾದಲ್ಲಿ ಜೊತೆಯಅಗಿ ಹೊಸ ವರ್ಷ ಆಚವಣೆ ಮಾಡಿದ್ದರು. ಒಟ್ಟಾಗಿ ಪ್ರವಾಸ ಮಾಡಿದ್ದು, ಸಂಕ್ರಾಂತಿ ಆಚರಿಸಿದ್ದೆಲ್ಲವೂ ಅವರ ನಡುವೆ ಪ್ರೀತಿ ಎಂದು ಹೇಳಲು ಕಾರಣವಾಗಿದೆ.
As usual nonsense..
Don’t we just
❤️ da news!— Vijay Deverakonda (@TheDeverakonda) February 21, 2022