ಐಎಂಡಿಬಿಯಲ್ಲಿ ಕೇವಲ 1.7 ರೇಟಿಂಗ್ ಪಡೆದ ಲೈಗರ್! ಲಾಲ್‌ ಸಿಂಗ್‌ ಚಡ್ಡಾಗಿಂತ ಕಳಪೆ‌ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ, ಬಿಡುಗಡೆ ದಿನವೇ ಆನ್‌ ಲೈನ್‌ ನಲ್ಲಿ ಸೋರಿಕೆ, ವಿಜಯ್‌ ದೇವರಕೊಂಡ ವಿರುದ್ಧ ಬಹಿಷ್ಕಾರದ ಬಿಸಿಗಳಿಂದ ಬಸವಳಿದಿದ್ದ  ‘ಲೈಗರ್’ ಚಿತ್ರಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ದಿ ಇಂಟರ್‌ ನೆಟ್‌ ಮೂವಿ ಡೇಟಾಬೇಸ್ (ಐಎಂಡಿಬಿ)‌ ವೆಬ್‌ ಸೈಟ್‌ನಲ್ಲಿ ಕೇವಲ 1.7 ರೇಟಿಂಗ್ ಸಿಕ್ಕಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಗೆ ಪ್ರೇಕ್ಷಕರು 5 ರೇಟಿಂಗ್‌ ಪಾಯಿಂಟ್‌ ನೀಡಿದ್ದರು. ಇದನ್ನು ಅತ್ಯಂತ ಕಳಪೆ ಎಂದು ಪರಿಗಣಿಸಲಾಗಿತ್ತು. ಲೈಗರ್‌ ಗೆ ಅದಕ್ಕಿಂತಲೂ ಅತ್ಯಂತ ಕಡಿಮೆ ರೇಟಿಂಗ್‌ ಪಾಯಿಂಟ್ಸ್‌ ಗಳು ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.
ವಿಜಯ್ ದೇವರಕೊಂಡ ನಟನೆಯ ಸ್ಪೋರ್ಟ್ಸ್ ಆಕ್ಷನ್-ಡ್ರಾಮಾ ‘ಲೈಗರ್’ ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ಗೆ ಕರೆತಲಿದೆ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಮಿಂಚಲಿದೆ ಎಂದು ಹಲವರು ನಂಬಿದ್ದರು. ಆದರೆ ಫಲಿತಾಂಶವು ಎಲ್ಲರಿಗೂ ನಿರಾಶಾದಾಯಕವಾಗಿತ್ತು. ಬಾಕ್ಸಾಫೀಸ್‌ ನಲ್ಲಿ ಕಡಿಮೆ ಗಳಿಕೆ, ಐಎಂಡಿಬಿಯಲ್ಲಿ ಕಳಪೆ ರೇಟಿಂಗ್ ಜೊತೆಗೆ, ‘ಲೈಗರ್’ ಚಿತ್ರ ವೀಕ್ಷಿಸಿದ ಅಭಿಮಾನಿಗಳು ಆನ್‌ಲೈನ್‌ನಲ್ಲಿ ನೆಗೆಟಿವ್‌ ರಿವ್ಯೂಗಳನ್ನು ಹಂಚಿಕೊಂಡಿದ್ದರಿಂದ ಲೈಗರ್‌ ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ.

ಲೈಗರ್‌ ಕಳಪೆ ರೇಟಿಂಗ್‌ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಏಕೆಂದರೆ ‘ಲೈಗರ್’ ವರ್ಷದ ಕಡಿಮೆ-ರೇಟಿಂಗ್‌ ಪಡೆದ ಹಿಂದಿ ಚಿತ್ರವೆಂಬ ಕುಖ್ಯಾತಿ ಪಾತ್ರವಾಗಿದೆ. ರಣಬೀರ್ ಕಪೂರ್ ಅವರ ‘ಶಂಶೇರಾ’, ತಾಪ್ಸಿ ಪನ್ನು ಅಭಿನಯದ ‘ದೋಬಾರಾ’ ಮತ್ತು ಇತರ ಚಿತ್ರಗಳು ವಿಜಯ್-ಅನನ್ಯ ಅಭಿನಯದ ಚಿತ್ರಕ್ಕಿಂತ ಉತ್ತಮ ಸ್ಕೋರ್ ಗಳಿಸಿವೆ.
ಮತ್ತೊಂಡೆದೆ ಮುಂಬೈನ ಥಿಯೇಟರ್ ಮಾಲೀಕರು ವಿಜಯ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. “ತಮ್ಮ ʼಹೇಳಿಕೆಗಳಿಂದʼ ತಾಪ್ಸಿ ಪನ್ನು, ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಯಾವ ಸಂಕಷ್ಟ ಅನುಭವಿಸಿದ್ದಾರೆಂದು ಎಲ್ಲರಿಗೂ ತಿಳಿದಿದೆ. ವಿಜಯ್ ಸಂದರ್ಶನದ ಸಮಯದಲ್ಲಿ ಅಮಿರ್‌ ಪರ ನೀಡಿದಂತಹ ಹೇಳಿಕೆಗಳು ಚಿತ್ರದ ಕಲೆಕ್ಷನ್‌ ಮೇಲೆ ಕಠಿಣ ಪರಿಣಾಮ ಬೀರಿತು.” ಎಂದು ಥಿಯೇಟರ್ ಮಾಲೀಕರರೊಬ್ಬರು ಬೇಸರ ತೋಡಿಕೊಂಡಿದ್ದು ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!