Sunday, October 2, 2022

Latest Posts

ಬಿಜೆಪಿ ಸೇರ್ತಾರಾ ಮಿಥಾಲಿ ರಾಜ್?: ಜೆ ಪಿ ನಡ್ಡಾ ಭೇಟಿ ಮಾಡಿದ ಮಹಿಳಾ ಕ್ರಿಕೆಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಇನ್ನಿಲ್ಲದ ಕಸರತ್ತು​ ನಡೆಯುತ್ತಿದ್ದು, ಇದಕ್ಕಾಗಿ ಸಭೆಯ ಸಭೆ ಆಯೋಜನೆ ಮಾಡುತ್ತಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕ್ಯಾಪ್ಟನ್​​, ಮಹಿಳಾ ಕ್ರಿಕೆಟ್​​ನ ಸಚಿನ್​ ತೆಂಡೂಲ್ಕರ್​ ಎಂದು ಗುರುತಿಸಿಕೊಂಡಿರುವ ಮಿಥಾಲಿ ರಾಜ್​​ ಅವರನ್ನು ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಹೋಟೆಲ್​​​​ವೊಂದರಲ್ಲಿ ಮಿಥಾಲಿ ರಾಜ್​ ಹಾಗೂ ನಟ ನಿತಿನ್​​ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿ ಮಾಡಿದ್ದು, ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಿಥಾಲಿ ಹಾಗೂ ನಟ ನಿತಿನ್​​​ ಕಮಲ ಮುಡಿಯಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಖಚಿತ ಮಾಹಿತಿ ಹೊರಬಿದ್ದಿಲ್ಲ.

ಈ ಹಿಂದೆ ಮುನುಗೋಡಿನಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಬೆನ್ನಲ್ಲೇ ಖಾಸಗಿ ಹೋಟೆಲ್​​​ನಲ್ಲಿ ಜೂನಿಯರ್​ ಎನ್​​​ಟಿಆರ್​​ ಅವರನ್ನು ಭೇಟಿ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!