ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದಿ. ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ತಮಿಳು ನಟ ದಳಪತಿ ವಿಜಯ್ ಭೇಟಿ ನೀಡಿ, ದರುಶನ ಪಡೆದರು.
ಯಾರಿಗೂ ಸಣ್ಣ ಸುಳಿವು ನೀಡದೆ ಸಾಮಾನ್ಯ ಅಭಿಮಾನಿಯಂತೆ ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದ ವಿಜಯ್, ಹೂಗುಚ್ಚ ಇಡುವ ಮೂಲಕ ನಮಿಸಿದರು.
ಅಪ್ಪು ಕುಟುಂಬ ಸದಸ್ಯರಿಗೂ ಈ ಕುರಿತು ಮಾಹಿತಿ ನೀಡದೆ ಬಂದು ತೆರಳಿದ್ದಾರೆ.