ಹೊಸದಿಗಂತ ಡಿಜಿಟಲ್ ಡೆಸ್ಕ್:
ರೌಡಿ ಬಾಯ್ ವಿಜಯ್ ದೇವರಕೊಂಡ ಈಗ ಪಕ್ಕಾ ಡಿವೈನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಹೌದು, ಗುಜರಾತಿಯಲ್ಲಿ ದೊಡ್ಡ ಸದ್ದು ಮಾಡಿ ಬ್ಲಾಕ್‌ಬಸ್ಟರ್ ಆದ ‘ಲಾಲೋ: ಕೃಷ್ಣ ಸದಾ ಸಹಾಯತೆ’ ಅನ್ನೋ ಸಿನಿಮಾದ ತೆಲುಗು ರಿಮೇಕ್‌ನಲ್ಲಿ ವಿಜಯ್ ದೇವರಕೊಂಡ ಸಾಕ್ಷಾತ್ ಶ್ರೀಕೃಷ್ಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಮೊದಲು ಈ ರೋಲ್‌ಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಹೆಸರು ಕೇಳಿಬಂದಿತ್ತು. ಆದರೆ ಈಗ ಬಂದಿರೋ ವರದಿಗಳ ಪ್ರಕಾರ, ಈ ರೇಸ್‌ನಲ್ಲಿ ವಿಜಯ್ ದೇವರಕೊಂಡ ಮುನ್ನಡೆ ಸಾಧಿಸಿದ್ದು, ಕೃಷ್ಣನ ಪಾತ್ರಕ್ಕೆ ಇವರೇ ಫೈನಲ್ ಆಗಿದ್ದಾರೆ. ತೆಲುಗಿನ ಪ್ರಖ್ಯಾತ ನಿರ್ಮಾಪಕ ದಿಲ್ ರಾಜು ಈ ರಿಮೇಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.

ಏನಿದು ಕಥೆ?
ಈ ಸಿನಿಮಾದ ಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ. ಒಬ್ಬ ಸಾಮಾನ್ಯ ಆಟೋ ಡ್ರೈವರ್ ಕಷ್ಟಕ್ಕೆ ಸಿಲುಕಿ, ಕದ್ದು ಮುಚ್ಚಿ ಒಂದು ಬಂಗಲೆಗೆ ಕನ್ನ ಹಾಕಲು ಹೋಗುತ್ತಾನೆ. ಆದರೆ ಅಲ್ಲಿಗೆ ಹೋದವನು ಹೊರಗೆ ಬರಲಾಗದೆ ಸಿಕ್ಕಿಬೀಳುತ್ತಾನೆ. ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬ ವಿಚಿತ್ರ ವ್ಯಕ್ತಿ ಬಂದು ಅವನಿಗೆ ಸಹಾಯ ಮಾಡುತ್ತಾನೆ. ಆಮೇಲೆ ಗೊತ್ತಾಗೋದೇನೆಂದರೆ, ಬಂದವನು ಬೇರೆ ಯಾರೂ ಅಲ್ಲ, ಸಾಕ್ಷಾತ್ ಶ್ರೀಕೃಷ್ಣ. ಒಂದು ಕಡೆ ಥ್ರಿಲ್ಲರ್, ಇನ್ನೊಂದು ಕಡೆ ಭಕ್ತಿ ಹಾಗೂ ಎಮೋಷನ್ ಈ ಎರಡರ ಸಮ್ಮಿಶ್ರಣವೇ ಈ ಸಿನಿಮಾ.

ಈ ‘ಲಾಲೋ’ ಸಿನಿಮಾ 2025ರ ದೀಪಾವಳಿ ಟೈಮ್‌ನಲ್ಲಿ ರಿಲೀಸ್ ಆದಾಗ ಥಿಯೇಟರ್‌ನಲ್ಲಿ ಜನವೇ ಇರಲಿಲ್ಲ, ಸಿನಿಮಾ ಫ್ಲಾಪ್ ಆಯ್ತು ಅಂದ್ಕೊಂಡಿದ್ದರು. ಆದ್ರೆ 3 ವಾರದ ನಂತರ ‘ವರ್ಡ್ ಆಫ್ ಮೌತ್’ ಅಂದ್ರೆ ಸಿನಿಮಾ ನೋಡಿದ ಜನ ” ಏನ್ ಸಿನಿಮಾ ಗುರು ಇದು!” ಎಂದು ಒಬ್ಬರಿಗೊಬ್ಬರು ಹೇಳ್ತಾ ಹೇಳ್ತಾ, 4ನೇ ವಾರಕ್ಕೆ ಥಿಯೇಟರ್‌ಗಳು ಹೌಸ್‌ಫುಲ್ ಆದವು. ಕೊನೆಗೆ ಭಾರಿ ಕಲೆಕ್ಷನ್ ಮಾಡಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು.

ವಿಜಯ್ ಕೈಯಲ್ಲಿ ಸಿನಿಮಾಗಳ ಲೈನ್ ಅಪ್
ಈಗಾಗಲೇ ವಿಜಯ್ ದೇವರಕೊಂಡ ಅವರ ಕೈಯಲ್ಲಿ ಸಾಲು ಸಾಲು ದೊಡ್ಡ ಸಿನಿಮಾಗಳಿವೆ. ರಶ್ಮಿಕಾ ಮಂದಣ್ಣ ಜೊತೆಗಿನ ರಣಬಾಲಿ ಸಿನಿಮಾ ಅಕ್ಟೋಬರ್ 16, 2026 ಕ್ಕೆ ರಿಲೀಸ್ ಆಗಲಿದೆ. ರವಿ ಕಿರಣ್ ಕೋಲ ನಿರ್ದೇಶನದ ರೌಡಿ ಜನಾರ್ದನ ಮಾಸ್ ಆಕ್ಷನ್ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದು, ಇದು ಡಿಸೆಂಬರ್ 2026 ರಲ್ಲಿ ತೆರೆಗೆ ಬರಲಿದೆ. ‘ಹೈ ನಾನ್ನ’ ಖ್ಯಾತಿಯ ಶೌರ್ಯುವ್ ಜೊತೆ ರೋಮ್ಯಾಂಟಿಕ್ ಆಕ್ಷನ್ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.
ಈ ಸಾಲಿಗೆ ಈಗ ‘ಕೃಷ್ಣ’ನ ರೂಪದಲ್ಲಿ ಬರ್ತಿರೋ ‘ಲಾಲೋ’ ರಿಮೇಕ್ ಕೂಡ ಸೇರ್ಪಡೆಯಾಗಿದ್ದು, ವಿಜಯ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಮಾಸ್, ಆಕ್ಷನ್ ನೋಡಿ ಅಭ್ಯಾಸವಾಗಿದ್ದ ಜನರಿಗೆ, ವಿಜಯ್ ಅವರ ಈ ‘ಡಿವೈನ್’ ಅವತಾರ ಹೇಗೆ ಅನಿಸಲಿದೆ ಎಂದು ಕಾದು ನೋಡಬೇಕಿದೆ.



