September 8, 2026
Tuesday, September 8, 2026
spot_img

‘ಜೈಲರ್ 2’ ಪೋಸ್ಟ್‌ಪೋನ್ ವದಂತಿಗೆ ಫುಲ್ ಸ್ಟಾಪ್: ದಸರಾ ಹಬ್ಬಕ್ಕೆ ತಲೈವಾ ಎಂಟ್ರಿ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ರಿಲೀಸ್ ಮುಂದೂಡಲ್ಪಟ್ಟಿದೆ, ಕೆಲವು ದೃಶ್ಯಗಳ ಮರುಚಿತ್ರೀಕರಣ ನಡೆಯುತ್ತಿದೆ ಎನ್ನುವ ವದಂತಿಗಳು ಸದ್ದು ಮಾಡುತ್ತಿದ್ದವು. ಈ ಸುದ್ದಿಯನ್ನು ಕೇಳಿ ತಲೈವಾ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದರು. ಆದರೆ, ಈಗ ಸಿನಿಮಾದ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ನೀಡಿದ್ದು, ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬಿಗ್ ಅಪ್ಡೇಟ್ ನೀಡಿದೆ.

ಸನ್ ಪಿಕ್ಚರ್ಸ್ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಸಿನಿಮಾ ಯಾವುದೇ ಕಾರಣಕ್ಕೂ ಪೋಸ್ಟ್‌ಪೋನ್ ಆಗುತ್ತಿಲ್ಲ, ಹೇಳಿದಂತೆಯೇ ಅಕ್ಟೋಬರ್ 15ಕ್ಕೆ ಥಿಯೇಟರ್‌ಗೆ ಲಗ್ಗೆ ಇಡಲಿದೆ ಎಂದು ಸ್ಪಷ್ಟಪಡಿಸಿದೆ.

“ಅಕ್ಟೋಬರ್ 15ಕ್ಕೆ ಅಲಪ್ಪಾರ ಕಿಲಪ್ಪುರೊಂ” ಎನ್ನುವ ಕ್ಯಾಪ್ಷನ್‌ನೊಂದಿಗೆ ಅಭಿಮಾನಿಗಳಲ್ಲಿ ಮತ್ತೆ ಹೊಸ ಹುಮ್ಮಸ್ಸು ತಂದಿದೆ. ದಸರಾ ಹಬ್ಬದ ರಜಾದಿನಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, ಮೊದಲ ವಾರಾಂತ್ಯದಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಖಚಿತವಾಗಿದೆ.

ಈ ವರುಷದ ಜುಲೈನಲ್ಲಿ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ರಜನಿಕಾಂತ್ ಅವರ ಐಕಾನಿಕ್ ಪಾತ್ರ ‘ಟೈಗರ್ ಮುತ್ತುವೇಲ್ ಪಾಂಡಿಯನ್’ ನಟನೆಯ ಝಲಕ್ ತೋರಿಸಿ ಇಡೀ ಭಾರತೀಯ ಚಿತ್ರರಂಗದ ಕುತೂಹಲ ಹೆಚ್ಚಿಸಲಾಗಿತ್ತು. ಅದಾದ ಮೇಲೆ ಆಗಸ್ಟ್‌ನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆಯ ‘ಅಲಾ ಬೋಲೆಲೊ’ ಹಾಡು ರಿಲೀಸ್ ಆಗಿ ಧಮಾಕಾ ಎಬ್ಬಿಸಿತ್ತು.

ಒಟ್ಟಿನಲ್ಲಿ ದಸರಾ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಮಾಸ್ ಆಕ್ಷನ್ ಧಮಾಕಾ ಸಿನಿಮಾ ಮತ್ತು ತಲೈವಾ ಅಬ್ಬರ ನೋಡುವುದಕ್ಕೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !