ಹೊಸದಿಗಂತ ವರದಿ, ಮಂಡ್ಯ :
ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಗರದಲ್ಲಿ ಪಥ ಸಂಚಲನ ನಡೆಯಿತು.
ನಗರದ ಬಾಲಭವನದ ಬಳಿ ಜಮಾಯಿಸಿದ ಗಣವೇಷಧಾರಿ ಸ್ವಯಂಸೇವಕರು, ನಗರದ ಕೆ.ಆರ್. ರಸ್ತೆ, ವಿದ್ಯಾಗಣಪತಿ ದೇವಾಲಯ, ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ ಬಳಸಿಕೊಂಡು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ವಿವೇಕಾನಂದ ಜೋಡಿ ರಸ್ತೆ ಮಾರ್ಗವಾಗಿ ಮತ್ತೆ ಬಾಲ ಭವನ ಬಳಿಗೆ ಧಾವಿಸಿ ಸಂಪನ್ನವಾಯಿತು.
ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು 99 ವರ್ಷ ಪೂರೈಸಿ 100ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಹಾಗೂ ವಿಜಯದಶಮಿ ಅಂಗವಾಗಿ ಪಥಸಂಚಲನ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗಣವೇಷಧಾರಿ ಸ್ವಯಂಸೇವಕರು ಪಥ ಸಂಚಲನ ನಡೆಸುತ್ತಿದ್ದ ಮಾರ್ಗದಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಮನೆಗಳ ನಿವಾಸಿಗಳು ಪುಷ್ಪವೃಷ್ಠಿಗರೆದು ಸ್ವಾಗತಿಸಿದರು.