Wednesday, February 8, 2023

Latest Posts

ವಿಜಯ ಸಂಕಲ್ಪ ಅಭಿಯಾನ:ಜ.28ರಂದು ಕುಂದಗೋಳದಲ್ಲಿ ಅಮಿತ್‌ ಶಾ ರೋಡ್‌ ಶೋ

ಹೊಸದಿಗಂತ ವರದಿ ಹುಬ್ಬಳ್ಳಿ:‌ 

ಬಿಜೆಪಿ ಧಾರವಾಡ ಜಿಲ್ಲೆಯ ಗ್ರಾಮಾಂತರ ಘಟಕದ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಕುಂದಗೋಳದಲ್ಲಿ ಜ. 28ರಂದು ಮಧ್ಯಾಹ್ನ 2.30 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಜ.27 ರಂದು ರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮಿಸಲಿದ್ದಾರೆ. ಜ.28 ರಂದು ಬೆಳಿಗ್ಗೆ ಬಿವಿಬಿ ಕಾಲೇಜಿನಲ್ಲಿ ಸಮಾರಂಭದಲ್ಲಿ ಹಾಗೂ ಧಾರವಾಡ ಕೃವಿವಿ ಯಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಬಳಿಕ ಕುಂದಗೋಳಕ್ಕೆ ಭೇಟಿ ನೀಡುವ ಅವರು ಮೊದಲಿಗೆ ಶಂಭುಲಿಂಗ ದೇವಸ್ಥಾನ ವಿಶೇಷ ಪೂಜೆ. ಬಳಿಕ ರೋಡ್ ಶೋ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕರಪತ್ರ ವಿತರಣೆ ಹಾಗೂ ಗೋಡೆ ಬರಹ ಬಿಡಿಸುವರು ಸುಮಾರು 25 ಸಾವಿರ ಜನರು ಶೋ ನಲ್ಲಿ ಭಾಗವಹಿಸುವರು.

ಬಳಿಕ ಸಂಜೆ ಬೆಳಗಾವಿ ಗ್ರಾಮಾಂತರ ಘಟಕದಿಂದ ಎಂ.ಕೆ. ಹುಬ್ಬಳ್ಳಿ ಯಲ್ಲಿ ಸಂಜೆ 4 ಗಂಟೆಗೆ ಸಾರ್ವಜನಿಕ ಸಭೆ ಹಾಗೂ ಪಕ್ಷ ಸಂಘಟನೆ ಸಭೆ ನಡೆಸಲಿದ್ದಾರೆ. ಮೂರು ವಿಧಾನ ಸಭಾ ಕ್ಷೇತ್ರವಾದ ಖಾನಾಪುರ, ಬೈಲಹೊಂಗಲ ಹಾಗೂ ಚನ್ನಮ್ಮ ಕಿತ್ತೂರ‌ ಕ್ಷೇತ್ರದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ‌ 10 ದಿನಗಳ ಕಾಲ ನಡೆದು ಬೂತ್ ಅಭಿಯಾನ ಯಶ್ವಿಯಾಗಿದೆ. ಅದೇ ರೀತಿ ವಿಜಯ ಸಂಕಲ್ಪ ಯಾತ್ರೆ ಸಹ ನಡೆಯುತ್ತಿದೆ.‌ ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮಾಡಿ ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ದರು. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್ ಶೋ ದಲ್ಲಿ ಭಾಗವಹಿಸಿ ಚುನಾವಣೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!