Saturday, February 4, 2023

Latest Posts

ಬಿಜೆಪಿಯಿಂದ ಜ.21 ರಂದು ವಿಜಯ ಸಂಕಲ್ಪ ಅಭಿಯಾನ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮನ!

ಹೊಸದಿಗಂತ ವರದಿ,ಬಳ್ಳಾರಿ:

ಬಿಜೆಪಿ ವತಿಯಿಂದ ಜ.21 ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು, ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜೀ ಅವರು ಚಾಲನೆ ನೀಡಲಿದ್ದಾರೆ, ಅದರಂತೆ ನಮ್ಮ ಜಿಲ್ಲೆಯಲ್ಲೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಚಾಲನೆ ನೀಡಲಾಗಿದೆ ಎಂದು‌ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿರಗುಪ್ಪ ಪಟ್ಟಣದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಕಂಪ್ಲಿಯಲ್ಲಿ ಎಮ್ಮೆಲ್ಸಿ ವೈ.ಎಂ.ಸತೀಶ್, ಸಂಡೂರಿನಲ್ಲಿ ಸಂಸದ ವೈ.ದೇವೇಂದ್ರಪ್ಪ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಈ ಅಭಿಯಾನದ ಯಶಸ್ವಿಗೆ ಪಕ್ಷದ ಯುವ ಮುಖಂಡ ಓಬಳೇಶ್ ಅವರನ್ನು ಸಂಚಾಲಕ ಹಾಗೂ ಯುವ ಮೋರ್ಚಾದ ಅಡವಿಸ್ವಾಮೀ ಅವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಮಹಿಳಾ ಘಟಕದ ಅಧ್ಯಕ್ಷೆ ಸುಗುಣ, ರೈತ ಮೋರ್ಚಾದ ಅದ್ಯಕ್ಷ ಪ್ರಕಾಶ್, ಯುವ ಮೋರ್ಚಾದ ಅಧ್ಯಕ್ಷ ಸುದರ್ಶನ ರೆಡ್ಡಿ, ನೇತೃತ್ವದ ತಂಡವನ್ನೀ ರಚಿಸಲಾಗಿದೆ.
ಪ್ರತಿ ಮನೆ ಮನೆಗೂ ತೆರಳಿ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ನೀಡುವುದು, ಕಾರು ಅಥವಾ ದ್ವಿಚಕ್ರ ವಾಹನಕ್ಕೆ ಹಾಗೂ ಮನೆಗೆ ಒಂದರಂತೆ 3ಸ್ಟೀಕರ್ ಗಳನ್ನು ಅಂಟಿಸಲಾಗುವುದು ಎಂದರು. ಬೂತ್ ವಿಜಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಈ ಅಭಿಯಾನದಲ್ಲಿ 30,585 ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದ್ದು, ಈ ಸಾಧನೆಯಲ್ಲಿ ರಾಜ್ಯದಲ್ಲೇ ನಮ್ಮ ಜಿಲ್ಲೆ 10ನೇ ಸ್ಥಾನದಲ್ಲಿದ್ದು, ಇದು ನಮ್ಮ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಮಾದ್ಯಮ ವಕ್ತಾರರು ಡಾ.ಬಿ.ಕೆ.ಸುಂದರ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷ ಎಚ್.ಹನುಮಂತಪ್ಪ, ಎರ್ರಂಗಳಿ ತಿಮ್ಮಾರೆಡ್ಡಿ, ಮಾಧ್ಯಮ ಸಂಚಾಲಕ ರಾಜೀವ್ ತೊಗರಿ, ಸಹ ಸಂಚಾಲಕ ದರೋಜಿ ರಮೇಶ್, ಸುಗುಣ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!