ವಿಜಯ ಸಂಕಲ್ಪ ಯಾತ್ರೆ : ಮಹಾಲಕ್ಷ್ಮಿ ಲೇಔಟ್‌ನಲ್ಲಿ ಭರ್ಜರಿ ರೋಡ್‌ ಶೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್ ‌:

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು ಭಾರತೀಯ ಜನತಾ ಪಕ್ಷವು ‘ವಿಜಯ ಸಂಕಲ್ಪ ಯಾತ್ರೆʼ ರಾಜ್ಯದ ವಿವಿಧೆಡೆ ನಡೆಸುತ್ತಿದೆ. ಇಂದು ವಿಜಯ ಸಂಕಲ್ಪ ಯಾತ್ರೆಯನ್ನು ರಾಯಚೂರು, ಕೊಡಗು, ವಿಜಯಪುರ ಹಾಗೂ ಬೆಂಗಳೂರಿನ ನಾನಾ ಕಡೆ ಆಯೋಜಿಸಲಾಗಿತ್ತು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಭರ್ಜರಿ ರೋಡ್ ಶೋ ನಡೆಯಿತು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆ, ಜನಪರ ಕಾರ್ಯಗಳನ್ನು ವಿವರಿಸಲಾಯಿತು. ಕಾಂಗ್ರೆಸ್- ಜೆಡಿಎಸ್ ವೈಫಲ್ಯಗಳನ್ನು ತಿಳಿಸಿ, ಅಭಿವೃದ್ಧಿ-ಜನಪರ ಸರಕಾರಕ್ಕಾಗಿ ಬಿಜೆಪಿಗೆ ಮತ ನೀಡಲು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ವಿನಂತಿಸಿಕೊಂಡರು.

ರೋಡ್ ಶೋ ನಲ್ಲಿ ಕೇಂದ್ರ ಸಚಿವ ಎಲ್.ಮುರುಗನ್, ರಾಜ್ಯದ ಸಚಿವ ಮತ್ತು ಯಾತ್ರೆ-4ರ ಉಸ್ತುವಾರಿ ಆರ್ ಅಶೋಕ್, ಸಚಿವ ಗೋಪಾಲಯ್ಯ ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮುಖಂಡರಾದ ಸಚ್ಚಿದಾನಂದ ಮೂರ್ತಿ, ನಾರಾಯಣಗೌಡ, ಎಸ್. ಹರೀಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!