ಉಡುಪಿ ಮಠಕ್ಕೆ ಸೇರಿದ ಜಾಗಗಳು ಮುಸ್ಲಿಂ ರಾಜರು ಕೊಟ್ಟಿದ್ದು ಅನ್ನೋರಿಗೆ ರಕ್ಷಿತ್ ಶೆಟ್ಟಿ ಕ್ಲಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ದೇಗುಲಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂದು ಕರ್ನಾಟಕ ಕಾಂಗ್ರೆಸ್ ಮುಖಂಡ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾವಿರಾರು ವರ್ಷಗಳ ಇತಿಹಾಸವಿರುವ ದೇಗುಲದ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ರಕ್ಷಿತ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತೆಗೆದುಕೊಂಡಿರುವ ರಕ್ಷಿತ್ ಶೆಟ್ಟಿ ಉಡುಪಿ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಸಂಪೂರ್ಣವಾದ ಮಾಹಿತಿ ಇಲ್ಲದೆ ಸಾರ್ವಜನಿಕವಾಗಿ ನಾನ್‌ಸೆನ್ಸ್ ರೀತಿಯಲ್ಲಿ ಮಾತನಾಡೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯುವ ಕೆಲಸ ಮಾಡ್ಬೇಡಿ, ದೇವರು ಮೆಚ್ಚುವ ಕೆಲಸ ಮಾಡಿ ಸಾಕು ಎನ್ನುವ ಕಮೆಂಟ್ ಜತೆ ಪೇಜಾವರ ಶ್ರೀಗಳು ದೇಗುಲದ ಭೂಮಿ ಬಗ್ಗೆ ಮಾತನಾಡುವ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಇದಕ್ಕೂ ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿ ನನ್ನ ಜನ್ಮಸ್ಥಳ ಬಕೆಟ್ ಅಲ್ಲ, ಟ್ಯಾಂಕರ್ ಹಿಡೀತಿನಿ, ಶ್ರೀಗಳು ಯಾವ ಜಾಗದ ಬಗ್ಗೆ ಮಾತನಾಡ್ತಿದ್ದಾರೆ ಅನ್ನೋ ಮಾಹಿತಿ ನನಗಿಲ್ಲ, ಕಾರ್‌ಸ್ಟ್ರೀಟ್ ಜಮೀನು ಬಗ್ಗೆ ಮಾತನಾಡ್ತಿಲ್ಲ ಅನ್ನೋದನ್ನು ಹೇಳಬಲ್ಲೆ. ಅನಂತೇಶ್ವರ ದೇವಸ್ಥಾನ ಕೃಷ್ಣಮಠಕ್ಕಿಂತಲೂ ಹಳೆಯದು, ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!