Sunday, December 10, 2023

Latest Posts

ಅರೇಹಳ್ಳಿಯಲ್ಲಿ ಆರ್‌ಎಸ್‌ಎಸ್ ವತಿಯಿಂದ ವಿಜಯದಶಮಿ ಪಥಸಂಚಲನ

ಹೊಸ ದಿಗಂತ ವರದಿ, ಬೇಲೂರು :

ಕಾಣದ ಕೈಗಳು ದೇಶವನ್ನು ಆಂತರಿಕ ಹಾಗೂ ಬಾಹ್ಯವಾಗಿ ಕುಗ್ಗಿಸುವ ಪ್ರಯತ್ನ ನಡೆಸುತ್ತಿರುವ ನಡುವೆ ನಮ್ಮ ಭಾರತ ಆರ್ಥಿಕ,ಸಾಮಾಜಿಕ ಕ್ಷೇತ್ರದಲ್ಲಿ ಬಲಾಢ್ಯ ದೇಶವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ
ದಕ್ಷಿಣ ಪ್ರಾಂತ್ಯದ ಗ್ರಾಮ ವಿಕಾಸ ಸಂಯೋಜಕ ಬಾಲಕೃಷ್ಣ ಕಿಣಿ ನುಡಿದರು.

ತಾಲೂಕಿನ ಅರೇಹಳ್ಳಿಯಲ್ಲಿ ಆರ್‌ಎಸ್‌ಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯ ದಶಮಿ ಪಥ ಸಂಚಲನವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂಸೆ ನೀಡುವುದ ಬಿಟ್ಟು ಶಾಂತಿ ಸಾರುವ ದೇಶವಾಗಿ ಇಂದು ವಿಶ್ವಗುರುವಾಗಿ ಮುನ್ನಡೆಯುತ್ತಿದೆ. ಇಲ್ಲಿಯವೆರಗೂ ನಮ್ಮ ದೇಶ ಮತ್ತೊಂದು ದೇಶದ ವಿರುದ್ಧ ದಂಡೆತ್ತಿ ಹೋದ ಉದಾಹರಣೆಗಳಿಲ್ಲ. ಪ್ರತಿಯೊಂದು ದೇಶದಲ್ಲೂ ಹಿಂದೂ ಧರ್ಮದ ದೇವಾಲಯವಿದ್ದು ನಮ್ಮ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎ.ಎನ್ ನಾಗರಾಜ್ ಮಾತನಾಡಿ, ವಿಶ್ವದಲ್ಲಿರುವ ದೇಶಗಳಲ್ಲಿ ಹಿಂದೂ ರಾಷ್ಟçಗಳು ಭಾರತ ಹಾಗೂ ನೇಪಾಳ. ಇಂದಿನ ಪ್ರಪಂಚವು ನಮ್ಮ ಅಂಗೈಯಲ್ಲಿರುವಂತೆ ಭಾಸವಾಗುತ್ತಿದ್ದರೂ ಸಂಬಂಧಗಳು ದೂರಾಗುತ್ತಿವೆ. ಇದರ ನಡುವೆ ಇಂದಿನ ಯುವ ಸಮುದಾಯದಲ್ಲಿ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ದುರದೃಷ್ಟರ. ಹಾಗಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯದಲ್ಲಿ ದೇಶಾಭಿಮಾನ, ಸಂಸ್ಕೃತಿಯನ್ನು ಬೆಳೆಸುವುದು ಅನಿವಾರ್ಯವಾಗಿದೆ ಎಂದರು.

302 ಗಣವೇಷಧಾರಿಗಳು, 174 ಸಾರ್ವಜನಿಕರು, 47 ಮಾತೆಯರನ್ನೊಳಗೊಂಡು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಪಥಸಂಚಲನ ಸಂತೋಷನಗರ,ಡಾ.ಶಿವಕುಮಾರ ಸ್ವಾಮೀಜಿ ವೃತ್ತ,ಮುಖ್ಯರಸ್ತೆ,ಹೊಸಪೇಟೆ, ಅಂಬೇಡ್ಕರ್ ವೃತ್ತ,ಸಂತೋಷನಗರ, ಮೇಲನಹಳ್ಳಿ ಬಳಿಕ ಸ.ಪ.ಪೂ ಕಾಲೇಜು ಮೈದಾನದಲ್ಲಿ ಸೇರಿಕೊಂಡು ವೇದಿಕೆ ಕಾರ್ಯಕ್ರಮ ಜರುಗಿತು.

ಈ ವೇಳೆ ತಾಲೂಕು ಆರ್‌ಎಸ್‌ಎಸ್ ಕಾರ್ಯವಾಹಕ ಪ್ರಸನ್ನ ಹೊಸಮನೆ, ಜಿಲ್ಲಾ ಸಹಕಾರ್ಯವಾಹ ಶ್ರೀಧರ್, ಸಂಪರ್ಕ ಪ್ರಮುಖ್ ಶ್ರೀಕಾಂತ್, ಕಾರ್ಯಕಾರಿಣಿ ಸದಸ್ಯ ರವಿ ಆಚಾರ್ಯ, ನಾರಾಯಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!