ಅಕ್ರಮ ಹಣ ವರ್ಗಾವಣೆ: ಪಂಜಾಬ್‌ನ ಆಪ್‌ ಶಾಸಕ ಜಸ್ವಂತ್‌ ಸಿಂಗ್‌ ಅರೆಸ್ಟ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಪಂಜಾಬ್‌ನ ಆಪ್‌ ಶಾಸಕ ಜಸ್ವಂತ್‌ ಸಿಂಗ್‌ ಗಜ್ಜನ್‌ಮಜ್ರನನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದು , ಮೊಹಾಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. 41 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ 4 ಬಾರಿ ನೊಟೀಸ್‌ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಇಂದು ಆಪ್‌ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿರುವಾಗಲೇ ಮಲೇರ್‌ಕೋಟ್ಲಾ ಜಿಲ್ಲೆಯ ಅಮರ್‌ಘರ್‌ ಪ್ರದೇಶದಲ್ಲಿ ಶಾಸಕನನ್ನು ಬಂಧಿಸಿದೆ.

40 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಸಿಬಿಐ ಶಾಸಕ ಜಸ್ವಂತ್‌ ಸಿಂಗ್‌ ನನ್ನು ಸಂಬಂಧಟ್ಟ ಪ್ರಾಪರ್ಟಿಗಳ ಮೇಲೆ ದಾಳಿ ನಡೆಸಿದಾಗ 16.57 ಲಕ್ಷ ಹಣ, 88 ವಿದೇಶಿ ಕರೆನ್ಸಿ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಈ ಸಂಬಂಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಶಾಸಕನ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು.

ಪ್ರಕರಣ ಏನು?
ಬ್ಯಾಂಕ್‌ ಆಪ್ ಇಂಡಿಯಾ ಶಾಖೆ ಜಸ್ವಂತ್‌ ಸಿಂಗ್‌ ಗಜ್ಜನ್‌ಮಜ್ರಗೆ ಸಂಬಂಧಿಸಿದ ಆಹಾರ ಧಾನ್ಯ ಮಾರಾಟ ಮಳಿಗೆಗೆ 2011-14ರಲ್ಲಿ ಸಾಲ ನೀಡಿದ್ದು ಸಾಲ ಬಳಕೆ ಬಗ್ಗೆ ಯಾವುದೇ ದಾಖಲೆ ತೋರಿಸದೇ ಹಾಗೂ ಪರಿಶೀಲನೆಗೆ ಬಂದಾಗ ಯಾವುದೇ ಸರಕಗಳನ್ನೂ ತೋರಿಸದೇ ವಂಚಿಸಿದ್ದಾರೆ, ಹಾಗೇ ಯಾವ ಕಾರಣಕ್ಕೆ ಬ್ಯಾಂಕ್‌ನಿಂದ ಸಾಲ ನೀಡಲಾಗಿತ್ತೋ ಆಕಾರಣಕ್ಕೆ ಹಣ ಬಳಕೆಯಾಗಿಲ್ಲ ಎಂದು ಬ್ಯಾಂಕ್‌ ದೂರು ದಾಖಲಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!