ಅಭಿವೃದ್ಧಿಯಲ್ಲಿ ವಿಜಯನಗರ ಕ್ಷೇತ್ರ ರಾಜ್ಯದಲ್ಲೇ ಮಾದರಿಯಾಗಲಿದೆ: ಸಚಿವ ಆನಂದ್‌ ಸಿಂಗ್ ವಿಶ್ವಾಸ

ಹೊಸದಿಗಂತ ವರದಿ, ವಿಜಯನಗರ:

ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮ ಸರ್ಕಾರವೇ ಅಧಿಕಾರದಲ್ಲಿದ್ದು, ಅವಧಿಯಲ್ಲಿ ವಿಜಯನಗರ ಕ್ಷೇತ್ರ ಹಾಗೂ ನೂತನ ಜಿಲ್ಲೆಯ ಎಲ್ಲ ತಾಲೂಕುಗಳ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ, ಇದು ಭರವಸೆಯಲ್ಲ, ನುಡಿದಂತೆ ನಡೆಯುವೆ ಎಂದು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಹೇಳಿದರು.
ನಗರದ ಪ್ರಿಯದರ್ಶಿನಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಬಿಜೆಪಿ ಆಶ್ರಯದಲ್ಲಿ ನಗರಸಭೆ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದ ಮತದಾರರ ಪ್ರೀತಿ, ಆರ್ಶಿವಾದ, ಬೆಂಬಲದಿಂದ ಸೋಲಿಲ್ಲದ ಸರದಾರನಾಗಿ ನಿಮ್ಮೆದುರು‌ ನಿಂತಿರುವೆ, ನಾನು ಯಾವತ್ತೂ ಯಾವುದೇ ಭರವಸೆ‌ ನೀಡಿದರೂ ಈಡೇರಿಸದೇ ಬಿಟ್ಟ ಉದಾಹರಣೆಗಳಿಲ್ಲ, ಬಿಡುವ ಜಾಯಮಾನವೂ ನನ್ನದಲ್ಲ, ವಿಜಯನಗರ ನೂತನ ಜಿಲ್ಲೆ ರಚನೆ ಬಗ್ಗೆ ಸಾಕಷ್ಟು ಬಾರಿ ನಮ್ಮ ಜನರಿಗೆ‌ ಭರವಸೆ ನೀಡಿದ್ದೇ, ಅದರಂತೆ ನಡೆದುಕೊಂಡಿರುವೆ, ನಿಮ್ಮೆಲ್ಲರ ಆರ್ಶಿವಾದದಿಂದ ಸಚಿವನಾಗಿ ನಿಮ್ಮೆದುರು ನಿಂತಿರುವೆ, ಅವಧಿಯಲ್ಲಿ ವಿಜಯನಗರ ‌ಕ್ಷೇತ್ರದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎಂದರು.
9 ಜನ ಪಕ್ಷೇತರ ಸದಸ್ಯರು ಬಿಜೆಪಿ ಪಕ್ಷದ ತತ್ವ ಹಾಗೂ ಸಿದ್ದಾಂತಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಅತ್ಯಂತ ಸಂತಸ ಮೂಡಿಸಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಇದೇ ರೀತಿ‌ ಮುಂದುವರೆಯಲಿ, ಅವಧಿಯಲ್ಲಿ ಹೊಸಪೇಟೆ ನಗರದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎಂದರು. ಇದಕ್ಕೂ ಮುನ್ನ ಬಿಜೆಪಿ ನೂತನ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ್ ನಾಲತ್ವಾಡ್, ಹೂಡಾ ಅದ್ಯಕ್ಷ ಅಶೋಕ್ ಜೀರೆ, ಸೇರಿದಂತೆ ಪಕ್ಷದ ವಿವಿಧ ನಾಯಕರು, ಕಾರ್ಯಕರ್ತರು, ನೂತನ ಸದಸ್ಯರು ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!