ವಿಜಯಪುರ: ಮಕ್ಕಳ ಅಕ್ರಮ ಸಾಕಣೆ ಮಾಡುತ್ತಿದ್ದ ನರ್ಸ್ ಬಂಧನ; 4 ನವಜಾತ ಶಿಶುಗಳ ರಕ್ಷಣೆ

ಹೊಸದಿಗಂತ ವರದಿ ವಿಜಯಪುರ:
ಮಕ್ಕಳನ್ನು ಅಕ್ರಮ ಸಾಕಣೆ ಮಾಡುತ್ತಿದ್ದ ನರ್ಸ್ ಯೊಬ್ಬಳನ್ನು ನಗರದ ಅಥಣಿ ಗಲ್ಲಿ‌ಯಲ್ಲಿ ಬಂಧಿಸಲಾಗಿದ್ದು, 3 ಹೆಣ್ಣು, 1 ಗಂಡು ಮಗುವನ್ನು ರಕ್ಷಿಸಲಾಗಿದೆ.
ಇಲ್ಲಿನ ಜಯಮಾಲಾ‌ ಬಿಜಾಪುರ (ಪಾಟೀಲ) ಎಂಬ ನರ್ಸ್, ತನ್ನ ಮನೆಯಲ್ಲಿ ಅಕ್ರಮವಾಗಿ ಮಕ್ಕಳನ್ನು ಸಾಕಣೆ ಮಾಡುತ್ತಿರುವ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ ತಂಡವು ಪೊಲೀಸರೊಂದಿಗೆ ದಾಳಿ ನಡೆಸಿದ್ದ ವೇಳೆ, ನರ್ಸ್ ಮನೆಯಲ್ಲಿ 3 ವರ್ಷದ ಎರಡು, 4 ವರ್ಷದ ಒಂದು ಹಾಗೂ 11 ತಿಂಗಳ ಒಂದು ಹಸುಗೂಸನ್ನು ಅಕ್ರಮವಾಗಿ ಸಾಕಣೆ ಮಾಡುತ್ತಿರುವುದು ಪತ್ತೆಯಾಗಿದೆ.
ನರ್ಸ್ ಜಯಮಾಲಾ, ಜಿಲ್ಲೆಯ ಇಂಡಿ ತಾಲೂಕಿನ ಜಿಗಜಿಣಗಿ ಗ್ರಾಮದ ಪಿಎಚ್ ಸಿ ಸೆಂಟರ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಈಕೆ ಕಳೆದ‌ 3 ವರ್ಷದಿಂದ ಅನಧಿಕೃತವಾಗಿ ಮಕ್ಕಳನ್ನು ಬೇರೆಡೆಯಿಂದ ಕರೆತಂದು ತಮ್ಮ ಪರಿಚಯದವರಿಗೆ ಕೊಟ್ಟಿರುತ್ತಾರೆ ಎಂಬ ಮಾಹಿತಿ ಮೇರೆಗೆ‌ ದೂರು‌ ದಾಖಲಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!