ಹೊಸ ದಿಗಂತ ವರದಿ, ಬಸವನಬಾಗೇವಾಡಿ:
ವಿದ್ಯುತ್ ತಗುಲಿ ಕಟ್ಟಡ ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಪಟ್ಟಣದ ತೆಲಗಿ ರಸ್ತೆಯ ನಂದಿ ತರಕಾರಿ ಮಾರುಕಟ್ಟೆ ಬಳಿ ನಿರ್ಮಾಣಗೊಳ್ಳುತ್ತಿರುವ ವಾಣಿಜ್ಯ ಸಂಕೀರ್ಣದಲ್ಲಿ ನಡೆದಿದೆ.
ಮೃತಪಟ್ಟವನನ್ನು ಚಂದ್ರಕಾಂತ ಭೀಮಪ್ಪ ಗೋಡೆಕಟ್ಟಿ (38) ಎಂದು ಗುರುತಿಸಲಾಗಿದೆ.
ಇಲ್ಲಿನ ವಾಣಿಜ್ಯ ಸಂಕೀರ್ಣದ ಪರದೆ ತಯಾರಿಸುವ ಸಮಯದಲ್ಲಿ ಪಕ್ಕದಲ್ಲಿ ಇರುವ ವಿದ್ಯುತ್ ತಂತಿಯ ಮೇಲೆ ಆಯ ತಪ್ಪಿ ಬಿದ್ದು, ವಿದ್ಯುತ್ ತಗುಲಿ ಕಾರ್ಮಿಕ ಸಾವಿಗೀಡಾಗಿದ್ದಾನೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.