ಹೊಸದಿಗಂತ ವರದಿ,ಚಿತ್ರದುರ್ಗ:
ಬಿಜೆಪಿ ನೂತನ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಹೊಸ ಬಾಟಲಿಯಲ್ಲಿ ಹಳೆ ವೈನ್ ನೋ ರಿಯಾಕ್ಷನ್ ಎಂದು ವ್ಯಂಗವಾಡಿದ್ದಾರೆ.
ಚಿತ್ರದುರ್ಗ ಬಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಅವರ ಆಂತರಿಕ ವಿಚಾರ, ನಾವು ಮೂಗು ತೂರಿಸಲ್ಲ. ನಮ್ಮ ಸಿದ್ದಾಂತ ಬೇರೆ, ಅವರ ಸಿದ್ದಾಂತ ಬೇರೆ. ಅವರು ಸಮಾಜ ಹೊಡೆಯುವ ನೀತಿ ಹೊಂದಿದ್ದಾರೆ. ಬಿಜೆಪಿ ನಮ್ಮ ರಾಜ್ಯದಲ್ಲಿ ಅವರ ನೇತೃತ್ವದಲ್ಲಿ ಅಧಿಕಾರ ಪಡೆಯಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್‌ಗೆ ವಿಜಯೇಂದ್ರ ಅವರನ್ನು ಹೋಲಿಕೆ ಮಾಡಬೇಡಿ. ಅವರ ಅನುಭವ, ತಾಳ್ಮೆ, ಪಕ್ಷ ಸಂಘಟನೆ ಅವರಿಗೆ ಹೋಲಿಕೆ ಸರಿಯಲ್ಲ. ಎಲ್ಲಾ ಜಾತಿಯವರು ನಮ್ಮ ಪಕ್ಷದ ಜೊತೆಗೆ ಇದ್ದಾರೆ. ಎಸ್.ಟಿ.ಸೋಮಶೇಖರ್ ಹೇಳಿಕೆ ಬಿಜೆಪಿ ವಿರುದ್ದ ಅಸಮಾಧಾನ ವಿಚಾರ. ಸೋಮಶೇಖರ್ ನನ್ನ ಆಪ್ತ, ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಹಲವು ಕಾರಣಗಳಿಂದ ಆಪರೇಷನ್ ಕಮಲಕ್ಕೆ ಹೋಗಿದ್ದರು. ವಾಪಸ್ ಬರುತ್ತಾರೆ ಎಂದರು.