ಹೊಸದಿಗಂತ ವರದಿ,ಚಿತ್ರದುರ್ಗ:
ಬಿಜೆಪಿ ಪಕ್ಷದ ನೂತನ ರಾಜ್ಯಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ಆಗಿರುವುದು ತುಂಬಾ ಸಂತಸದ ವಿಷಯ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಂತೋ? ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಪಕ್ಷದಲ್ಲಿ ಎಲ್ಲ್ಲರೂ ಇ?ಪಡುವಂತಹ ಮತ್ತು ಎಲ್ಲಾ ಜಾತಿ ಜನಾಂಗದವರು ಬೆಂಬಲಿಸುವಂತಹ ನಾಯಕರಾಗಿ ವಿಜಯೇಂದ್ರ ಅವರು ಹೊರಹೊಮ್ಮಿದ್ದಾರೆ. ರಾಜ್ಯದಲ್ಲಿ ಪಕ್ಷವು ಬಲಿ?ವಾಗಿ ಬೆಳೆಯಲು ಇವರು ಸಹಕಾರವಾಗಲಿದ್ದು, ಪಕ್ಷಕ್ಕೆ ಹೊಸ ಭರವಸೆ ಮೂಡಿದೆ ಎಂದು ಹೇಳಿದ್ದಾರೆ.
ಅವರ ತಂದೆಯಂತೆ ಇವರೂ ಸಹ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಸಂಘಟನೆ ಮೈಗೂಡಿಸಿಕೊಂಡಿದ್ದು ಜನರನ್ನು ಆಕರ್ಷಿಸುವ ಶಕ್ತಿ ಇದೆ. ಇವರನ್ನು ಆಯ್ಕೆ ಮಾಡಿದಂತಹ ಕೇಂದ್ರದ ನಮ್ಮ ಪ್ರಧಾನಿ ನರೇಂದ್ರ ಮೋದಿ, ಅಮಿತ್ ?, ನಡ್ಡಾಜೀ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಅವರನ್ನು ನಮ್ಮ ಜಿಲ್ಲೆಗೆ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ತಿಳಿಸಿದ್ದಾರೆ.