ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಟಿ ರವಿ ಪರವಾಗಿ ಮಾತಾಡುತ್ತಾ ಬಿವೈ ವಿಜಯೇಂದ್ರ ಅವರು ಬಳೆತೊಟ್ಟಿಲ್ಲ, ಸೀರೆ ಉಟ್ಟಿಲ್ಲ ಅಂತ ಹೇಳಿದ ಮಾತುಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.
ನನಗೆ ಅವರ ಭಾಷೆ ಅರ್ಥವಾಗುತ್ತಿಲ್ಲ. ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮಾತಾಡುವಾಗ ನಾಲಗೆ ಮೇಲೆ ಹಿಡಿತ ಹೊಂದಿರಬೇಕು, ಪ್ರಾಯಶಃ ಅವರು ತನ್ನ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾತಾಡಿರುವಂತಿದೆ, ವಿಜಯೇಂದ್ರ ಮಾತಾಡುವಾಗ ನಾಲಗೆ ಮೇಲೆ ಹಿಡಿತ ಹೊಂದಿರಬೇಕು, ಪ್ರಾಯಶಃ ಅವರು ತನ್ನ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾತಾಡಿರುವಂತಿದೆ, ಸದನದಲ್ಲಿ ಒಬ್ಬ ಬಳೆ ತೊಟ್ಟ ಮಹಿಳೆ ವಿರುದ್ಧ ಅಶ್ಲೀಲ ಪದಬಳಕೆಯಿಂದ ಅವಮಾನವಾಗಿದೆ ಎಂದು ಹೇಳಿದರು.