Saturday, February 4, 2023

Latest Posts

ಅಧಿಕಾರದಲ್ಲಿದ್ದು ಅಭಿವೃದ್ಧಿ ಮಾಡದ ಸಿದ್ದರಾಮಯ್ಯ, ಕೋಲಾರದಲ್ಲಿ ಅಭಿವೃದ್ಧಿ ಮಾಡುವರೆ?: ಹೆಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದ ಮುಖ್ಯಮಂತ್ರಿಯಾಗಿ 5 ವಷ೯ ಅಧಿಕಾರದಲ್ಲಿದ್ದುಕೊಂಡು ಅಭಿವೃದ್ಧಿ ಮಾಡದ ಸಿದ್ದರಾಮಯ್ಯ, ಕೋಲಾರದಲ್ಲಿ ನಿಂತು ಅಭಿವೃದ್ಧಿ ಮಾಡುವರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಸೋಮವಾರ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರವಧಿಯಲ್ಲಿ ನೀರಾವರಿಗೆ 5 ಲಕ್ಷ ಕೋಟಿ ನೀಡುತ್ತೇನೆ ಎಂದು ಹೇಳಿದ್ದರು.ಆದರೆ ನೀಡಲಿಲ್ಲ. ಈ ಮಾತನ್ನು ಈಗಾಗಲೇ ನಾನು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೇನೆ ಎಂದರು.

ಕೊನೆಗೂ ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ನಿಲ್ಲುವುದಾಗಿ ಘೋಷಣೆ ಮಾಡಿದ್ದು,ಒಳ್ಳೆಯ ಸಂಗತಿ.ಒಬ್ಬ ಮಾಜಿ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಾದರೂ ನಿಲ್ಲುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ರಾಜ್ಯದಲ್ಲಿ ದೊಡ್ಡ ಲೀಡರ್ ಅವರೆಯಾಗಿದ್ದಾರೆ.ರಾಜಕೀಯ ಅನುಭವ ಇದೆ.ಸೀನಿಯರ್ ಲೀಡರ್ ಅವರೊಬ್ಬರೇ ಇದ್ದಾರೆ.ಹೀಗಾಗಿ ಕೋಲಾರದಲ್ಲಿ ಸವೇ೯ ಮಾಡಿ,ಅಳೆದು ತೂಗ ನಿಲ್ಲುವುದಕ್ಕೆ ಮುಂದಾಗಿದ್ದಾರೆ ಎಂದರು.

ನಮ್ಮ ಅಭ್ಯರ್ಥಿ ಕೂಡ ಕೋಲಾರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಯಾರಿಗೆ ಗೆಲವು, ಯಾರಿಗೆ ಸೋಲು ಎಂಬುದು ಆ ಭಾಗದ ಜನರು ತೀಮಾ೯ನಿಸಲಿದ್ದಾರೆ.ರಾಜ್ಯದಲ್ಲಿ 123 ಸ್ಥಾನ ಗೆಲ್ಲುವ ಗುರಿಯನ್ನು ನಾವು ಕೋಲಾರದಿಂದಲೆ ಆರಂಭ ಮಾಡುತ್ತೇವೆ ಎಂದು ಹೇಳಿದರು.

ಸಿದ್ದು ನಿಜ ಕನಸು ಪುಸ್ತಕ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ.ಬಿಜೆಪಿ, ಕಾಂಗ್ರೆಸ್,ನವರು ಅವರ ಕನಸು ಎನೆನಿದೆ ಎಂಬುದರ ಮಾತಾಡಿಕೊಳ್ಳಲಿ.ನಾನು ಮೊದಲನೆದಾಗಿ ಲೇಖಕ ಅಲ್ಲ.ಹೀಗಾಗಿ ಅವರ ಬಗ್ಗೆ ನಾನೇಕೆ ಪುಸ್ತಕ ಬರೆಯಲಿ ಎಂದರು.

ರಾಮನಗರದಲ್ಲಿ ರಾಮ ಮಂದಿರ ಕಟ್ಟುವ ವಿಚಾರವಾಗಿ ಮಾತನಾಡಿದ ಅವರು, ರಾಮ ಮಂದಿರವಾದರೂ ಕಟ್ಟಲಿ,ಆಂಜನೇಯ ಮಂದಿರವಾದರೂ ಕಟ್ಟಲಿ ಅಥವಾ ಬೇರೆ ಯಾವ ಮಂದಿರವಾದರೂ ಕಟ್ಟಲಿ ಎಲ್ಲದಕ್ಕೂ ನನ್ನ ಬೆಂಬಲವಿದೆ ಎಂದರು.

ಮೂರುವರೆ ವಷ೯ದಿಂದ ಕಟ್ಟದವರು,ಚುನಾವಣಾ ಸಮೀಪ ಬಂದಾಗ ಕಟ್ಟಲು ಹೊರಟಿದ್ದಾರೆ. ಚುನಾವಣೆ ಮುಗಿದ ಮೇಲೆ ಫೌಂಡೇಶನ್ ಜೊತೆಗೆ ಅವರು ಖಾಲಿ ಮಾಡಿಕೊಂಡು ಹೋಗುತ್ತಾರೆ ಎಂದು ಕುಟುಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!