ಇಸ್ರೋದ ಮತ್ತೊಂದು ಪ್ರಯೋಗ ಯಶಸ್ವಿ: ಚಂದ್ರನ ಮೇಲೆ ಮತ್ತೆ ಸಾಫ್ಟ್‌ ಲ್ಯಾಂಡ್‌ ಆದ ವಿಕ್ರಮ್ ಲ್ಯಾಂಡರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಂದ್ರನ ಅಂಗಳಕ್ಕೆ ಕಾಲಿಟ್ಟು ಅನ್ವೇಷಣೆ ಕೈಗೊಂಡಿರುವ ವಿಕ್ರಮ್ ಲ್ಯಾಂಡರ್​ನ ಎಂಜಿನ್​ ಅನ್ನು ಮತ್ತೊಮ್ಮೆ ಇಸ್ರೋ ಚಾಲನೆಗೊಳಿಸಿದೆ. ಎಂಜಿನ್ ಚಾಲನೆಗೊಳಿಸಿ ಲ್ಯಾಂಡರ್​ನ ಎತ್ತರವನ್ನು ಸುಮಾರು 40 ಸೆಂ.ಮೀ ಹೆಚ್ಚಿಸಿ, 30 – 40 ಸೆಂ.ಮೀ ದೂರದಲ್ಲಿ ಸಾಫ್ಟ್‌ ಲ್ಯಾಂಡ್ ಮಾಡಲಾಗಿದೆ ಎಂದು ಇಸ್ರೊ ಸೋಮವಾರ ಹೇಳಿದೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಇಸ್ರೊ, “ಚಂದ್ರಯಾನ -3 ಮಿಷನ್: ವಿಕ್ರಮ್ ಮತ್ತೆ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡ್ ಆಗಿದೆ!. ವಿಕ್ರಮ್ ಲ್ಯಾಂಡರ್ ತನ್ನ ಉದ್ದೇಶಿತ ಮಿಷನ್ ಗುರಿಗಳಿಗಿಂತ ಹೆಚ್ಚಿನದಾಗಿ ಸಾಧಿಸಿದೆ. ಇದು ಯಶಸ್ವಿಯಾಗಿ ಹಾಪ್ ಪ್ರಯೋಗಕ್ಕೆ ಒಳಗಾಗಿದೆ. ಸೂಚನೆಗಳ ಮೇರೆಗೆ ಅದು ಎಂಜಿನ್​ಗಳನ್ನು ಚಾಲನೆಗೊಳಿಸಿ ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು.” ಎಂದು ತಿಳಿಸಿದೆ.

ʼಪ್ರಾಮುಖ್ಯತೆ?: ಈ ‘ಕಿಕ್-ಸ್ಟಾರ್ಟ್’ ಭವಿಷ್ಯದಲ್ಲಿ ಅಲ್ಲಿಂದ ಮರಳುವ ವಿಧಾನ ಮತ್ತು ಮಾನವ ಕಾರ್ಯಾಚರಣೆಗಳನ್ನು ಉತ್ತೇಜಿಸುತ್ತದೆ!ʼ ಎಂದು ಇಸ್ರೊ ಹೇಳಿದೆ.

ʼಎಲ್ಲ ವ್ಯವಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಆರೋಗ್ಯಕರವಾಗಿವೆ. ನಿಯೋಜಿಸಲಾದ ರ್ಯಾಂಪ್, ಚಾಸ್ಟೆ ಮತ್ತು ಐಎಲ್ಎಸ್ಎಗಳನ್ನು ಹಿಂದಕ್ಕೆ ಮಡಚಿ ಪ್ರಯೋಗದ ನಂತರ ಯಶಸ್ವಿಯಾಗಿ ಮರು ನಿಯೋಜಿಸಲಾಯಿತುʼ ಎಂದು ಇಸ್ರೊ ಟ್ವೀಟ್​​ ಮೂಲಕ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!