Wednesday, September 27, 2023

Latest Posts

ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ: ಚಂದ್ರಯಾನ-3 ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್​ ಲ್ಯಾಂಡರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆಯ ಯಶಸ್ಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಚಂದ್ರಯಾನ 3 ನೌಕೆಯಿಂದ (ಪ್ರೊಪಲ್ಷನ್‌ ಮಾಡ್ಯೂಲ್) ವಿಕ್ರಮ್‌ ಲ್ಯಾಂಡರ್‌ ಅನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದ್ದು, ಇದರೊಂದಿಗೆ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆಗಲು ಹೊರಟಿದೆ.

ಇಸ್ರೋ ವಿಜ್ಞಾನಿಗಳು ಇಂದು ಪ್ರೊಪಲ್ಷನ್‌ ಮಾಡ್ಯೂಲ್ ನಿಂದ ಲ್ಯಾಂಡರ್‌ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಈ ಮೂಲಕ ಇನ್ನು ಲ್ಯಾಂಡರ್‌ ಸಾಫ್ಟ್‌ಲ್ಯಾಂಡ್‌ ಆಗುವತ್ತ ಸಾಗಿದೆ.

ಆಗಸ್ಟ್‌ 23ರಂದು ಸಂಜೆ 5.47ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡ್‌ ಆಗಲಿದ್ದು, ಈ ಮೂಲಕ ಭಾರತ ಇತಿಹಾಸವನ್ನು ಸೃಷ್ಟಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!