ವಿದ್ಯಾರ್ಥಿಗಳೇ ಇಲ್ಲಿದೆ..ಪ್ರಬಂಧ ಸ್ಪರ್ಧೆಯಲ್ಲಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿಮಗೆ ಬರವಣಿಗೆಗಳಲ್ಲಿ ಆಸಕ್ತಿ ಇದೆಯೇ? ಹಾಗಾದ್ರೆ ಬನ್ನಿ ವಿಕ್ರಮ ಕನ್ನಡ ವಾರಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಇದರಲ್ಲಿ ಭಾಗವಹಿಸಿ ವಿಜೇತರಾದವರು ಆಕರ್ಷಕ ಬಹುಮಾನಗಳನ್ನೂ ಪಡೆಯಬಹುದು.

ಪ್ರಬಂಧದ ವಿಷಯ: ವಿಶ್ವಶಾಂತಿಗಾಗಿ ಹಿಂದುತ್ವ

ಸ್ಪರ್ಧೆಯ ನಿಬಂಧನೆಗಳು:

* ವಯೋಮಿತಿ: 18 ರಿಂದ 30 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
* ಭಾಷೆ : ಕನ್ನಡ/ಇಂಗ್ಲಿಷ್.
ಸ್ವಹಸ್ತಾಕ್ಷರದ ಬರಹಗಳನ್ನು ಮಾತ್ರ ಸ್ವೀಕರಿಸಲಾಗುವುದು
* ಪದಮಿತಿ: 2,000 ಪದಗಳು
* ಕೊನೆಯ ದಿನಾಂಕ: 31ನೇ ಜನವರಿ 2023
* ಕಳುಹಿಸಬೇಕಾದ ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ವಿಕ್ರಮ ವಾರಪತ್ರಿಕೆ,
ನಂ.106, 5ನೇ ಮುಖ್ಯರಸ್ತೆ, ಪಿ.ಬಿ.ನಂ.1804, ಚಾಮರಾಜಪೇಟೆ, ಬೆಂಗಳೂರು –560018

ವಿಜೇತರಾದವರಿಗೆ ಬಹುಮಾನ ಪಟ್ಟಿ ಹೀಗಿದೆ
* ಪ್ರಥಮ: ರೂ. 25,000 ಮತ್ತು ಪ್ರಮಾಣ ಪತ್ರ
* ದ್ವಿತೀಯ: ರೂ 15,000 ಮತ್ತು ಪ್ರಮಾಣ ಪತ್ರ
* ತೃತೀಯ ರೂ 10,000 ಮತ್ತು ಪ್ರಮಾಣ ಪತ್ರ
* ಮತ್ತು ತಲಾ ರೂ. 2,000 ಸೇರಿದಂತೆ 10 ಸಮಾಧಾನಕರ ಬಹುಮಾನಗಳು ಸಿಗಲಿವೆ.

ಈ ಕುರಿತು ನಿಮಗೆ ಅನುಮಾನಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8861875790.

ಸೂಚನೆ:
* ಕಾಲೇಜಿನ ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರ (study Cirtificate) ವನ್ನು ಮತ್ತು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್‌ ಪ್ರತಿಯನ್ನು ಕಡ್ಡಾಯವಾಗಿ ಜತೆಗಿರಿಸಬೇಕು.
* ಪ್ರಬಂಧದ ಕವರ್ ಮೇಲೆ ‘ಪ್ರಬಂಧ ಸ್ಪರ್ಧೆ’ ಎಂದು ತಪ್ಪದೆ ನಮೂದಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!