ರಿಲೀಸ್‌ ಆಯ್ತು ಸುದೀಪ್‌ ಚಿತ್ರ ʼವಿಕ್ರಾಂತ್​ ರೋಣ’ ಟ್ರೇಲರ್‌; ಜು.28ರಂದು ತೆರೆಮೇಲೆ ಅಬ್ಬರಿಸಲಿದ್ದಾನೆ ರೋಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್​ ರೋಣ ಸಿನಿಮಾದ ಹೊಸ ಟೀಸರ್​ ಇಂದು ಬಿಡುಗಡೆಯಾಗಿದೆ. ಇದರೊಂದಿಗೆ ಚಿತ್ರದ ರಿಲೀಸ್‌ ಡೇಟ್‌ ಸಹ ಅನೌನ್ಸ್‌ ಮಾಡಿದೆ ಚಿತ್ರತಂಡ. ಶನಿವಾರ ಬೆಳಗ್ಗೆ 9.55ಕ್ಕೆ ಟೀಸರ್​ ರಿಲೀಸ್​ ಆಗಿದೆ. ಪ್ಯಾನ್‌ ಇಂಡಿಯಾ ಚಿತ್ರವಾಗಿರುವ ವಿಕ್ರಾಂತ್‌ ರೋಣ ಕನ್ನಡ, ತಮಿಳು, ತೆಲುಗಿ, ಹಿಂದಿ, ಮಳೆಯಾಳಂ ಸೇರಿದಂತೆ 10 ಭಾಷೆಗಳಲ್ಲಿ ತೆರೆಕಾಣಲಿದೆ. ವಿವಿಧ ಚಿತ್ರರಂಗಗಳ ಪ್ರಖ್ಯಾತ ನಟರು ಸಾಮಾಜಿಕ ಜಾಲತಾಣಗಳಲ್ಲಿ ಆಯಾ ಭಾಷೆಯ ಟೀಸರ್​ ಅನ್ನು ರಿಲೀಸ್‌ ಮಾಡಿರುವುದು ವಿಶೇಷ. ಹಿಂದಿ ಟೀಸರ್‌ ಸಲ್ಮಾನ್‌ ಖಾನ್‌, ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್​ ಲಾಲ್​ ಹಾಗೂ ಇಂಗ್ಲಿಷ್​ನಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ವಿಕ್ರಾಂತ್​ ರೋಣ ಟೀಸರ್​ ಬಿಡುಗಡೆ ಮಾಡಿದ್ದಾರೆ.

ಕನ್ನಡ ಅವತರಣಿಕೆಯ ಟೀಸರ್ ಅನ್ನು ಕಿಚ್ಚ ಸುದೀಪ್​ ಅವರು ಬಿಡುಗಡೆ ಮಾಡಿದ್ದಾರೆ. ಈ ಚಿತ್ರವು ಜು.28ರಂದು ಚಿತ್ರ ವಿಶ್ವಾದ್ಯಂತ ತರೆಮೇಲೆ ಬರಲಿದೆ ಎಂದು ಚಿತ್ರತಂಡವು ಘೋಷಿಸಿದೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಅನೂಪ್​ ಭಂಡಾರಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರೂಪ್‌ ಬಂಡಾರಿ, ನೀತಾ ಅಶೋಕ್‌, ಜಾಕ್ವೆಲಿನ್‌ ಫರ್ನಾಂಡಿಸ್‌, ರವಿಶಂಕರ್‌ ಗೌಡ ಸೇರಿದಂತೆ ದೊಡ್ಡ ತಾರಾ ಬಳಗ ಚಿತ್ರದಲ್ಲಿದೆ. ಅಜನೀಶ್‌ ಲೋಕನಾಥ್‌ ಸಂಗೀತ, ಆಶಿಕ್‌ ಕೂಸುಗೊಳ್ಳಿ ಸಂಕಲನವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!